ಡಿ.ವೈ.ಎಫ್. ಐ ಪ್ರತಿಭಟನೆ

ಸುರತ್ಕಲ್: ಸುರತ್ಕಲ್ ನಿಂದ ಕೈಕಂಬ ಹೋಗುವ ರಸ್ತೆಯ ಬಿ.ಎ.ಎಸ್.ಎಫ್ ಕಾರ್ಖಾನೆ ಬಳಿಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಬುಧವಾರ ಡಿ.ಐ.ಎಫ್.ಐ ವತಿಯಿಂದ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಲಾಯಿತು.
ಡಿ.ವೈ.ಎಫ್. ಐ ಮುಖಂಡ ಮುನಿರ್ ಕಾಟಿಪಳ್ಳ ಮಾತನಾಡಿ ಬಾಳ ಪಂಚಾಯಿತಿ ವ್ಯಾಪ್ತಿಯ ಹದ ಗೆಟ್ಟ ರಸ್ತೆಯಿಂದಾಗಿ ವಾಹನಗಳು ಹಲವು ಬಾರಿ ಅಪಘಾತ ಸಂಭವಿಸಿದೆ, ಎಂ.ಅರ್.ಪಿ.ಎಲ್ ಗೆ ಸಂಚರಿಸುವ ವಾಹನಗಳು ಹಾಗೂ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ತ್ವರಿತವಾಗಿ ಸರಿಪಡಿಸಬೇಕೆಂದು ಸಂಬಂಧ ಪಟ್ಟವರಲ್ಲಿ ಮನವಿ ಮಾಡಿದ್ದೇವೆ, ಆದರೂ ಜನಪ್ರತಿನಿಧಿಗಳು, ಯಾವುದೇ ಸ್ಪಂದನೆ ನೀಡಿಲ್ಲ, ಈ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸ್ಥಳಕ್ಕೆ ಭೇಟಿ ನೀಡಿದ ನಗರ ಪಾಲಿಕೆ ಇಂಜಿನೀಯರ್ ಅಬ್ದುಲ್ ಖಾದರ್ ಮಂಗಳೂರು ನಗರ ಪಾಲಿಕೆ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಂದಿನಿಂದಲೇ ಕಾಮಗಾರಿ ಪ್ರಾರಂಭಿಸಲಾಗುದು ಎಂದು ಹೇಳಿದರು.
ಈ ಸಂದರ್ಭ ಡಿ.ವೈ.ಎಫ್.ಐ ಕಾರ್ಯಕರ್ತ ಶ್ರೀನಾಥ ಕಾಟಿಪಳ್ಳ, ಬಿ.ಎಂ.ಇಂತಿಯಾಜ್, ಸಂತೋಷ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.

Nishanth ShettyKinnigoli-10161501 Kinnigoli-10161502 Kinnigoli-10161503 Kinnigoli-10161504 Kinnigoli-10161505

Comments

comments

Comments are closed.