ಕಟೀಲು ಸಾಮೂಹಿಕ ಮದುವೆ 8 ಜೋಡಿಗಳು ಹಸೆಮಣೆಗೆ

ಕಿನ್ನಿಗೋಳಿ: ನಮ್ಮ ಬದುಕಿನಲ್ಲಿ ಸಮಾಜಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ತಮ್ಮಿಂದಾದಷ್ಟು ಸೇವೆ ಸಹಾಯ ಮಾಡಿದಾಗ ಜೀವನ ಸಾರ್ಥಕ್ಯತೆಯನ್ನು ಪಡೆದು ಬದುಕು ಪಾವನವಾಗುತ್ತದೆ. ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇವರ ಜಂಟೀ ಆಶ್ರಯದಲ್ಲಿ ಬುಧವಾರ ಸಂಜೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವಿಭಜಿತ ದ.ಕನ್ನಡ-ಉಡುಪಿ ಜಿಲ್ಲೆ ಹಾಗೂ ಇತರ ಜಿಲ್ಲೆಗಳನ್ನು ಒಳಗೊಂಡ 8 ಜೋಡಿಗಳು ಹಸೆಮಣೆ ಏರಿದರು.

ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ ಧರ್ಮದರ್ಶಿ ಸುವರ್ಣ ಬಾಭಾ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದರು

ಈ ಸಂದರ್ಭ ಜಯಂತಿ ಆಸ್ರಣ್ಣ, ಕಸಾಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೇಶವ ಅಂಚನ್ ಮುಂಬಯಿ, ಕೆನೆರಾ ಜ್ಯುವೆಲ್ಲರ‍್ಸ್‌ನ ಧನಂಜಯ ಆಚಾರ್ ಮಂಗಳೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಯುಗಪುರುಷದ ಭುವನಾಭಿರಾಮ ಉಡುಪ, ಸತೀಶ್ ಎನ್. ಬಂಗೇರ, ಸುಧಾಕರ ಪೂಜಾರಿ ಮುಂಬಯಿ, ಎಂ.ವಿ ಭಟ್, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ದೇವಿಪ್ರಸಾದ ಶೆಟ್ಟಿ ಕೊಡೆತ್ತೂರು, ಗೋಪಾಲಕೃಷ್ಣ ಆಸ್ರಣ್ಣ, ಮೋಹನ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

ಹರೀಶ್ ಗೌಡ ಮತ್ತು ಹರಿಣಾಕ್ಷಿ, ಮಹಾಬಲ ಮತ್ತು ಬೇಬಿ, ಶಿವಕುಮಾರ್ ಮತ್ತು ಗೀತಾ, ರಂಜಿತ್ ಮತ್ತು ಸಾವಿತ್ರಿ, ಶಿವಪ್ರಸಾದ್ ಮತ್ತು ಪಿ. ಯಶೋದ, ಸಂದೀಪ್ ಮತ್ತು ಶ್ವೇತಾ, ವಸಂತ ದೇವಾಡಿಗ ಮತ್ತು ವಾಣಿಶ್ರೀ, ಹರಿಪ್ರಸಾದ್ ಮತ್ತು ಶ್ವೇತಾ ಒಟ್ಟು 8 ಜೋಡಿಗಳು ಹಸೆಮಣೆಯನ್ನು ಏರಿದರು. ನೂತನ ವಧುವರರಿಗೆ ಮದುವೆಯ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ಪಿ. ಸತೀಶ್ ರಾವ್ ವಂದಿಸಿದರು. ಡಾ. ರವಿತೇಜ ರಮ್ಯಾ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-11061504

Comments

comments

Comments are closed.

Read previous post:
Kinnigoli-11061503
ಪದ್ಮನೂರು ಬ್ಯಾಗ್ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ದಂಪತಿಯರು ಬ್ಯಾಗ್‌ಗಳು ಮತ್ತು ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಈ...

Close