ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ

ಮೂಲ್ಕಿ: ನುಸ್ರತುಲ್ ಮಸಾಕೀನ್ ಮೂಲ್ಕಿ ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದ 260 ವಿದ್ಯಾರ್ಥಿಗಳಿಗೆ ಸುಮಾರು 2ಲಕ್ಷ 80ಸಾವಿರ ವೆಚ್ಚದಲ್ಲಿ ಶೈಕ್ಷಣಿಕ ಸಲಕರಣಿಗಳನ್ನು ಪ್ರತಿ ವರ್ಷದಂತೆ ಸಂಸ್ಥೆಯ 49ನೇ ವರ್ಷಾಚರಣೆ ಪ್ರಯುಕ್ತ ವಿತರಿಸಲಾಯಿತು. ಕೇಂದ್ರ ಶಾಫಿ ಜುಮಾ ಮಸೀದಿ ವಠಾರದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಜಮಾತಿನ ಅಧ್ಯಕ್ಷ ಇಕ್ಪಾಲ್ ಅಹಮದ್ ವಹಿಸಿ, ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯವಾಗಲಿದ್ದು ಸಮಾಜದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉನ್ನತ ಶಿಕ್ಷಣ ಗಳಿಕೆಯೊಂದಿಗೆ ಸಮಾಜವನ್ನು ಅಭಿವೃದ್ಧಿಗೊಳಿಸಬೇಕು ಎಂದರು.

ಕೇಂದ್ರ ಶಾಫಿ ಜುಮಾ ಮಸೀದಿ ಖತೀಬರಾದ ಇಬ್ರಾಹಿಂ ದಾರಿಮಿ ದುವಾಃ ಆರ್ಶಿವಚನವಿತ್ತರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹಮ್ಮದ್ ನಝಿರ್ ಇವರು ಮಾತಾನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದ ಹಾಗೂ ದೇಶದ ಏಳಿಗೆಗಾಗಿ ಶ್ರಮಿಸುವ ಜತೆಗೆ ಸಾಮರಸ್ಯದ ಬದುಕಿಗೆ ಮುಂದಾಗಬೇಕು ಎಂದರು.
ಎಮ್.ಹೆಚ್ ಮಹಮ್ಮದ್ ಕುಂಞ ವ್ಯವಸ್ಥಾಪಕ ಶಾಂತಿ ಪ್ರಕಾಶನ ಮಂಗಳೂರು, ಸಂಸ್ಥೆಯ ಅಧ್ಯಕ್ಷ ಎಮ್.ಎ ಅಮಾನುಲ್ಲಾ, ಮೂಲ್ಕಿ ನ.ಪಂ ಸದಸ್ಯ ಪುತ್ತು ಬಾವ, ಕಾರ್ನಾಡು ಮಸೀದಿಯ ಖತೀಬರಾದ ಮುಸ್ತಫ, ಹನೀಫಿ ಜಮಾತಿನ ಕಾರ್ಯದರ್ಶಿ ಬಿ.ಎಮ್ ಲಿಯಾಕತಆಲಿ, ಕಾರ್ಯದರ್ಶಿ ಅಬ್ದುಲ್ ರಜಾಕ್, ಮಹಮ್ಮದ್ ಹುಸ್ಥನ್, ಮೊದಿನ್ ಮೂಲ್ಕಿ, ಎಮ್ ಎಸ್. ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.

Bhagyavan Sanil

Mulki-11061501

Comments

comments

Comments are closed.

Read previous post:
Mulkii-10161506
ಮುಲ್ಕಿ- ಪುಸ್ತಕ ವಿತರಣೆ

ಮೂಲ್ಕಿ: ಮೂಲ್ಕಿಯ ಕಾರ್ನಾಡಿನ ಅಟೋ ರಿಕ್ಷಾ ಚಾಲಕ-ಮಾಲಕರ ವತಿಯಿಂದ ಮೂಲ್ಕಿಯ ಕಾರ್ನಾಡಿನ ಸಿ ಎಸ್ ಐ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮೂಲ್ಕಿಯ ಸರ್ಕಾರಿ...

Close