ಬಿರುಸಿನ ಗಾಳಿಗೆ ದೊಡ್ಡ ಆಲದ ಮರ ಧರೆಗೆ

ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ನಿನ್ನೆ ಬೆಳಿಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದ್ದು ರಾತ್ರಿಯ ಬಿರುಸಿನ ಗಾಳಿಗೆ ಮೂಲ್ಕಿಯ ಪ್ರಧಾನ ಅಂಚೆ ಕಚೇರಿ ಸಮೀಪದ ಕೊಯ್ಯಾರುವಿನ ಕೋರ‍್ದಬ್ಬು ದೈವಸ್ಥಾನದ ಎದುರುಗಡೆಯ ಕಟ್ಟೆಯಲ್ಲಿದ್ದ ದೊಡ್ಡ ಆಲದ ಮರ ಬುಡ ಸಮೇತ ಕಿತ್ತು ಹೋಗಿ ರಸ್ತೆಗೆ ಬಿದ್ದಿದೆ. ರಸ್ತೆಯಲ್ಲಿ ಹೆಚ್ಚಿನ ಸಂಚಾರವಿಲ್ಲದ ಕಾರಣ ಯಾವುದೇ ಅನಾಹುತವಾಗಿಲ್ಲ.ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತುಬಾವು, ಕೊಯ್ಯಾರು ಕೋರ‍್ದಬ್ಬು ದೈವಸ್ಥಾನ ಸಮಿತಿಯವರು ಹಾಗೂ ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಲು ಸಹಕರಿಸಿದರು.

Prakash Suvarna

Mulki-12061501

Comments

comments

Comments are closed.

Read previous post:
Kinnigoli-11061505
ಕಿನ್ನಿಗೋಳಿ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯಲ್ಲಿ ೬೩ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ದಾನಿ ರುಡಾಲ್ಫ್ ಫೆರ್ನಾಂಡೀಸ್ ಬುಧವಾರ ವಿತರಿಸಿದರು. ಈ ಸಂದರ್ಭ ಬೆಥನಿ ಕಾನ್ವೆಂಟಿನ ಸುಪೀರಿಯರ್ ಭಗಿನಿ...

Close