ಅಭಿವೃದ್ದಿಯ ಮೂಲಮಂತ್ರ ನಮ್ಮದಾಗಬೇಕು

ಕಿನ್ನಿಗೋಳಿ: ಜನಪರ ಕಾಳಜಿಯ ದೇಶ ಸೇವೆ ಹಾಗೂ ಅಭಿವೃದ್ದಿಯ ಮೂಲಮಂತ್ರ ನಮ್ಮದಾಗಬೇಕು ಎಂದು ವೆಂಕಟರಮಣ ದೇವಳದ ದರ್ಶನ ಪಾತ್ರಿ ಹಾಗೂ ಖ್ಯಾತ ಚಿಂತಕ ವಸಂತನಾಯಕ್ ಫಲಿಮಾರ್‌ಕರ್ ಹೇಳಿದರು.
ಕೇಂದ್ರ ಸರಕಾರ ಕ್ಷೇತ್ರಾಭಿವೃದ್ಧಿಗಾಗಿ ಸಂಸದರಿಗೆ ನೀಡುವ ಸಂಸದರ ನಿಧಿಯನ್ನು ಸದ್ವಿನಿಯೋಗ ಮಾಡಿದ ಸಂಸದರಲ್ಲಿ ನಂ. ೧ ಹಾಗೂ ಮಾಧ್ಯಮಗಳು ನಡೆಸಿದ ಜನಮತದ ಅಧಾರದಲ್ಲಿ ರಾಜ್ಯದಲ್ಲಿ ನಂ. 1 ಎಂದು ಗುರುತಿಸಲ್ಲಟ್ಟ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲು ಅವರಿಗೆ ಮೂಲ್ಕಿ- ಮೂಡಬಿದಿರೆ ವಲಯದ ನಾಗರಿಕ ಸಮಿತಿಯಿಂದ ಕಿನ್ನಿಗೋಳಿಯ ರಾಜಾಂಗಣದಲ್ಲಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣದಲ್ಲಿ ಮಾತನಾಡಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ನಳಿನ್‌ಕುಮಾರ್ ನನ್ನ ಜೀವನದಲ್ಲಿ ಶಿಸ್ತು ಸಂಸ್ಕಾರ ಕಲಿಸಿದ ಸಂಘ ಹಾಗೂ ಆಶೀರ್ವಾದ ಉತ್ತೇಜನ ನೀಡಿದ ಮನೆ ಹಾಗೂ ಮನಗಳು ಸಮಾಜದಲ್ಲಿ ಅಭಿವೃದ್ಧಿ ಮಾಡಲು ಪ್ರೇರಣೆ ನೀಡಿದ್ದರಿಂದ ಯೋಜನಾ ನಿಧಿ ಸದ್ಬಳಕೆಯ ಕಾರ್ಯದಲ್ಲಿ ಯಶಸ್ಸು ಕಂಡಿದ್ದೇನೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದರು.

ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಎಫ್. ಮೋಂತೇರೋ, ಶಾಂತಿನಗರ ಜುಮ್ಮಾ ಮಸೀದಿಯ ಪಿ. ಜೆ. ಅಹ್ಮದ್ ಮದನಿ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಶುಭಾಶಂಸನೆಗೈದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನ ಭಟ್, ಉದ್ಯಮಿ ಶ್ರೀಪತಿ ಭಟ್, ನಿಡ್ಡೋಡಿ ಜಗನ್ನಾಥ ಶೆಟ್ಟಿ ಚಾವಡಿ ಮನೆ, ಭಾಸ್ಕರ ಕೋಟ್ಯಾನ್ ಬೆಳುವಾಯಿ , ಸಂತೋಷ್ ಕುಮಾರ್ ಹೆಗ್ಡೆ, ದೊಡ್ಡಯ್ಯ ಮೂಲ್ಯ ಗಡಿಕಾರರು ಕಟೀಲು, ಮೂಡಬಿದಿರೆಯ ಉದ್ಯಮಿಗಳಾದ ವಿಶ್ವನಾಥ ಪ್ರಭು, ಎಂ. ಶೀನಪ್ಪ, ಹರಿಶ್ವಂದ್ರ ಸಾಲ್ಯಾನ್ ಮುಲ್ಕಿ, ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಸಾವಿತ್ರಿ ಶೆಟ್ಟಿ ಕಿನ್ನಿಗೋಳಿ, ರಂಜನಿ ರಾವ್ ಕಿನ್ನಿಗೋಳಿ, ನಾಗೇಶ್ ಬಂಗೇರ, ತಿಮ್ಮಯ್ಯ ಶೆಟ್ಟಿ ಮೂಡಬಿದಿರೆ, ಸೂರ್ಯಕುಮಾರ್ ಹಳೆಯಂಗಡಿ, ಯೋಗಗುರು ಜಯ ಶೆಟ್ಟಿ ಕೆಂಚನಕೆರೆ, ಪುರಂದರ ಶೆಟ್ಟಿಗಾರ್ ಕಿನ್ನಿಗೋಳಿ, ಪೂವಪ್ಪ ಗೌಡ ನಿಡ್ಡೋಡಿ, ಯುಗಪುರುಷದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
ಶಶಿಕಲಾ ಗೀತಕಥನ ವಾಚಿಸಿದರು. ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಸ್ವಾಗತಿಸಿದರು. ಕಾರ್ಕಳ ಶಾಸಕ ಸುನೀಲ್ ಕುಮಾರ್ ಪ್ರಸ್ತಾವನೆಗೈದರು. ಪ್ರೋ. ಜಯರಾಮ ಪೂಂಜ ಅಭಿನಂದನಾ ಪತ್ರ ವಾಚಿಸಿದರು. ಸಂದೇಶ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-14061501 Kinnigoli-14061502 Kinnigoli-14061503

Comments

comments

Comments are closed.

Read previous post:
Mulki-12061501
ಬಿರುಸಿನ ಗಾಳಿಗೆ ದೊಡ್ಡ ಆಲದ ಮರ ಧರೆಗೆ

ಮೂಲ್ಕಿ: ಮೂಲ್ಕಿ ಪರಿಸರದಲ್ಲಿ ನಿನ್ನೆ ಬೆಳಿಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದ್ದು ರಾತ್ರಿಯ ಬಿರುಸಿನ ಗಾಳಿಗೆ ಮೂಲ್ಕಿಯ ಪ್ರಧಾನ ಅಂಚೆ ಕಚೇರಿ ಸಮೀಪದ ಕೊಯ್ಯಾರುವಿನ ಕೋರ‍್ದಬ್ಬು ದೈವಸ್ಥಾನದ ಎದುರುಗಡೆಯ...

Close