ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆ.

ಮೂಲ್ಕಿ:  ಮಾನಂಪಾಡಿ ನಿವಾಸಿಯೊಬ್ಬರು ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದು ಶನಿವಾರ ಮದ್ಯಾಹ್ನ ಶಾಂಭವಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಧೀರಜ್ ಸಾಲ್ಯಾನ(26) ಎಂದು ಗುರುತಿಸಲಾಗಿದೆ.
ಮೂಲ್ಕಿ ಸಮೀಪದ ಮಾನಂಪಾಡಿ ನಿವಾಸಿಧೀರಜ್ ಎಂ ಸಾಲ್ಯಾನ್(26) ಸರಿಯಾದ ಉದ್ಯೋಗವಿಲ್ಲದೆ ವಿಚಲಿತನಾಗಿದ್ದನು, ಕಳೆದ ಜೂನ್ 12 ರ ಸಂಜೆ ಮನೆಯಿಂದ ಹೋದವನು ಮನೆಗೆ ಬಾರದೇ ಏಕಾಏಕಿ ನಾಪತ್ತೆಯಾಗಿದ್ದ.
ಆದರೆ ಶನಿವಾರ ಮದ್ಯಾಹ್ನ ಮೂಲ್ಕಿಯ ವಿಜಯ ಕಾಲೇಜಿನ ಸಮೀಪ ಹಳೆ ಐಟಿಐ ಬಳಿ ಶಾಂಭವಿ ನದಿ ತೀರದಲ್ಲಿ ಶವವೊಂದು ಪತ್ತೆಯಾಗಿದ್ದು ತನಿಖೆ ನಡೆಸಿದ ಬಳಿಕ ಧೀರಜ್ ನದೆಂದು ಕಂಡು ಬಂದಿದೆ. ನಿರುದ್ಯೋಗದಿಂದ ಜೀವನದಲ್ಲಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿದೆ. ಈ ಬಗ್ಗೆ ಮೋಹನ್ ರವರು ಮೂಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Mulkii-15061504

Comments

comments

Comments are closed.

Read previous post:
Kinnigoli-15061502
ಬಳಕುಂಜೆ ವಿಜಯೋತ್ಸವ

ಕಿನ್ನಿಗೋಳಿ: ಮೇ 23 ರಂದು ನಡೆದ ಪಂಚಾಯಿತಿ ಚುನಾವಣೆಯಲ್ಲಿ ಮುಲ್ಕಿ ಹೋಬಳಿಯ ಬಳಕುಂಜೆ ಗ್ರಾಮ ಪಂಚಾಯಿತಿಯ ವಿಜೇತ ಬಿಜೆಪಿ ಬೆಂಬಲಿತ ಸದಸ್ಯರು ಭಾನುವಾರ ವಿಜಯೋತ್ಸವವನ್ನು ಆಚರಿಸಿದರು. ಕರ್ನಿರೆ...

Close