ಡಿ ಪಿ ಅನಂತ್ ಅವರಿಗೆ ಸನ್ಮಾನ

ಮೂಲ್ಕಿ: ರಾಜ, ಮಹಾ ರಾಜರ ಕಾಲದಿಂದಲೂ ತಿರುಪತಿ ಮತ್ತು ಕರ್ನಾಟಕದ ನಡೆವೆ ಅವಿನಾಭಾವ ಸಂಬಂಧ ತಿರುಪತಿಯಲ್ಲಿರುವ ಕರ್ನಾಟಕಕ್ಕೆ ಸೇರಿರುವ ಆಸ್ತಿ ಇದೆ ಇದನ್ನು ಕಬಳಿಸುವ ಯತ್ನ ನಡೆಯುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕೇಂದ್ರಕ್ಕೆ ನಿಯೋಗವನ್ನು ಕೊಂಡೊಯ್ದು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ತಿರುಪತಿಯ ನೂತನ ಟ್ರಸ್ಟಿಯವರು ಪ್ರಯತ್ನಿಸಬೇಕೆಂದು ಅಂತರಾಷ್ತ್ರೀಯ ಖ್ಯಾತಿಯ ವಾಸ್ತು ತಜ್ಷ, ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಬೆಂಗಳೂರಿನ ಆರ್ ಟಿ ನಗರದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ತಿರುಪತಿ ದೇವಳದ ಟಿ ಟಿಡಿಯ ನೂತನ ಟ್ರಸ್ಟಿಯಾಗಿ ನೇಮಕಗೊಂಡಿರುವ ಕರ್ನಾಟಕದ ಡಿ ಪಿ ಅನಂತ್ ಅವರನ್ನು ಬೆಂಗಳೂರಿನ ತಮ್ಮ ಆಶ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಅವರು ರಾಜ್ಯದಿಂದ ತಿರುಪತಿಗೆ ಹೆಚ್ಚಿನ ಭಕ್ತರು ದರ್ಶನ ನೀಡುತ್ತಿದ್ದು ದೇವಳಕ್ಕೆ ಮೈಸೂರು ರಾಜ ಮನೆತನ, ಶ್ರೀ ಕೃಷ್ಣ ದೇವರಾಯನ ವಿಜಯ ನಗರ ಸಾಮ್ರಾಜ್ಯದ ಕೊಡುಗೆಯು ಅಪಾರವಾಗಿದ್ದು ಕರ್ನಾಟಕದ ಕುರಿತಾಗಿ ಮಲ ತಾಯಿ ಧೋರಣೆ ನಡೆಯುತ್ತಿದ್ದು ರಾಜ್ಯದ ಭಕ್ತರಿಗೆ ದೇವಳದಲ್ಲಿ ಉತ್ತಮ ವ್ಯವಸ್ತೆ ಕಲ್ಪಿಸುವ ಕಾರ್ಯವಾಗಬೇಕೆಂದು ಅವರು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ತಿರುಪತಿ ದೇವಳದ ನೂತನ ಟ್ರಸ್ತಿ ಡಿ ಪಿ ಅನಂತ್ ರವರು ಸ್ವಾಮೀಜಿಯವರ ಮಾತಿನಂತೆ ಕರ್ನಾಟಕ ಮತ್ತು ತಿರುಪತಿ ದೇವಳದ ನಡುವೆ ಉತ್ತಮ ಸಂಬಂಧ ಕಲ್ಪಿಸಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಿರುಪತಿ ದೇವಳದ ಬೆಂಗಳೂರಿನ ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ವಸಂತ ಕುಮಾರಿ,ಸ್ವಾಮೀಜಿಯವರ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಉದ್ಯಮಿ ಪರ್ವತ್ ಆರ್ ಶೆಟ್ಟಿ ಉಪಸ್ಥಿತರಿದ್ದರು.

Prakash Suvarna

Mulkii-15061505

 

Comments

comments

Comments are closed.