ಕಟೀಲು ತಾಳ ಮದ್ದಳೆ ಸಪ್ತಾಹ- 2015 ಉದ್ಘಾಟನೆ

ಕಟೀಲು: ಪುರಾಣಕಥೆಗಳನ್ನು ಯಕ್ಷಗಾನ ತಾಳಮದ್ದಳೆಯ ಮೂಲಕವಾಗಿ ಜನರನ್ನು ಸಂಸ್ಕೃತಿ ಸಂಸ್ಕಾರ ಭರಿರನ್ನಾಗಿಸಲು ಸಾಧ್ಯ ಎಂದು ಕಟೀಲು ದೇವಳದ ಆಡಳಿತಾಽಕಾರಿ ನಿಂಗಯ್ಯ ಹೇಳಿದರು. ಅವರು ಜೂ. 15 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ಕಟೀಲು ತಾಳಮದ್ದಳೆ ಸಪ್ತಾಹ- 2015 ವತ್ರ ದರ್ಶನ ಉದ್ಘಾಟಿಸಿ ಮಾತನಾಡಿದರು. ಉದ್ಯಮಿ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಅಧ್ಯಕ್ಷತೆವಹಿಸಿದ್ದರು. ದೇವಳದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ , ಮಾಣಿಲದ ಉದ್ಯಮಿ ಶ್ರೀಧರ ಶೆಟ್ಟಿ , ಅಗ್ರಜಾ ಬಿಲ್ದರ‍್ಸ್ ಮಾಲಕ ಸಂದೇಶ ಶೆಟ್ಟಿ , ಐಕಳ ಕುರುಂಬಿಲ ಗುತ್ತು ರಾಮಣ್ಣ ಶೆಟ್ಟಿ , ತ್ಯಾಂಪಣ್ಣ ಶೆಟ್ಟಿ ಅಡ್ಯಾರು ಗುತ್ತು, ಪತ್ರಕರ್ತ ಸವೋತ್ತಮ ಅಂಚನ್‌ಮೂಲ್ಕಿ , ಉದ್ಯಮಿ ಚಂದ್ರಶೇಖರ ನಾನಿಲ್‌ಹಳೆಯಂಗಡಿ, ಡಾ.|ಶಶಿಕುಮಾರ್ ಕಟೀಲು ಉಪಸ್ಥಿತರಿದ್ದರು. ಶ್ರೀ ಹರಿಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Raghunath Kamath

Kinnigoli-16061508

Comments

comments

Comments are closed.

Read previous post:
Mulkii-16061507
ಶಿಕ್ಷಣದಿಂದ ಉತ್ತಮ ಸಮಾಜ ಸಾಧ್ಯ

ಮೂಲ್ಕಿ: ಗ್ರಾಮೀಣ ಮಕ್ಕಳಿಗೆ ಎಳವೆಯಲ್ಲೇ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣವನ್ನು ನೀಡುವುದರಲ್ಲಿ ಸಹಕರಿಸಿದರೆ ಉತ್ತಮ ಸಮಾಜ ಸಾಧ್ಯ ಎಂದು ವೇದಮೂರ್ತಿ ವಾಧಿರಾಜ ಉಪಾದ್ಯಾಯ ಕೊಲೆಕಾಡಿ ಹೇಳಿದರು. ಅವರು...

Close