ಶಿಕ್ಷಣದಿಂದ ಉತ್ತಮ ಸಮಾಜ ಸಾಧ್ಯ

ಮೂಲ್ಕಿ: ಗ್ರಾಮೀಣ ಮಕ್ಕಳಿಗೆ ಎಳವೆಯಲ್ಲೇ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣವನ್ನು ನೀಡುವುದರಲ್ಲಿ ಸಹಕರಿಸಿದರೆ ಉತ್ತಮ ಸಮಾಜ ಸಾಧ್ಯ ಎಂದು ವೇದಮೂರ್ತಿ ವಾಧಿರಾಜ ಉಪಾದ್ಯಾಯ ಕೊಲೆಕಾಡಿ ಹೇಳಿದರು.
ಅವರು ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಭೀಮಾ ಆಭರಣದವರು ಕೊಡ ಮಾಡಿದ ಕೊಡೆಗಳನ್ನು ವಿತರಿಸಿ ಮಾತನಾಡಿದರು.ಪದ್ಮಶ್ರೀ ಚ್ಯಾರಿಟೇಬಲ್ ಟ್ರಸ್ಟಿನ ಶಶಿಕಲಾ ಉಪಾದ್ಯಾಯ, ಅತಿಕಾರಿಬೆಟ್ಟು ಗ್ರಾ.ಪಂ.ಸದಸ್ಯ ಮನೋಹರ ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು. ವಾಧಿರಾಜ ಉಪಾದ್ಯಾಯ ಸ್ವಾಗತಿಸಿದರು, ಶ್ರೀವಿದ್ಯಾ ಧನ್ಯವಾದ ಅರ್ಪಿಸಿದರು, ಮನೋಹರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Puneethakrishna

Mulkii-16061507

 

Comments

comments

Comments are closed.

Read previous post:
Pavanje-16061504
ಪಾವಂಜೆ : ನೂತನ ಗೋಶಾಲೆ ಉದ್ಘಾಟನೆ

ಪಾವಂಜೆ : ಕಣ್ಣಿಗೆ ಕಾಣುವ ದೇವರು ಅಂದರೆ ಅದು ಗೋವುಗಳಾಗಿದ್ದು, ಅದನ್ನು ರಕ್ಷಿಸು ವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದು ಚಿಕ್ಕ ಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಸ್ವಾಮೀಜಿ...

Close