“ಕಾಲೆ ಕೋಲ” ಇದು ಸತ್ತವರಿಗೊಂದು ಕೋಲ

ಕಿನ್ನಿಗೋಳಿ :  ತುಳು ನಾಡು ಎಂದಾಕ್ಷಣ ನಮ್ಮ ಕಣ್ನೆದುರಿಗೆ ಬರುವುದು ಹಚ್ಚ ಹಸಿರಿನ ಪರಿಸರ, ಹೆಜ್ಜೆಗೊಂದು ದೈವಸ್ಥಾನ, ದೇವಸ್ಥಾನ, ಯಕ್ಷಗಾನ, ಕೋಲ, ಕಂಬಳ ಆದರೆ ಆಧುನಿಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿಗಳು ಆಚರಣೆಗಳು ನಾಶವಾಗುತ್ತಾ ಬಂದಿದೆ, ವೈಜ್ಞಾನಿಕ ಹಿನ್ನೆಲೆಯನ್ನು ಕೊಡಬಹುದಾದ ನಮ್ಮ ಆಚರಣೆಗಳು ಅಳಿವಿನ ಅಂಚಿನಲ್ಲಿದೆ ಅಂತಹ ಒಂದು ಆಚರಣೆಗಳಲ್ಲಿ ಕಾಲೆ ಕೋಲವೂ ಒಂದು ಸುಮಾರು 50-60 ವರ್ಷಗಳ ಹಿಂದೆ ತುಳುನಾಡಿನ ಪ್ರತಿಷ್ಠಿತ ಮನೆತನದಲ್ಲಿ ಸತ್ತವರಿಗೆ ಅವರ ಉತ್ತರ ಕ್ರಿಯೆ ದಿನ ಇಂತಹ ಕೋಲ ನಡೆಯುತ್ತಿತ್ತು, ಆದರೆ ಇಂದಿನ ದಿನಗಳಲ್ಲಿ ಇದರ ಆಚರಣೆಯೇ ಬಾರೀ ಅಪರೂಪ. ಇತ್ತಿಚೇಗಷ್ಟೆ ಮುಲ್ಕಿ ಸಮೀಪದ ಬಂಟ ಮನೆತನಗಳಲ್ಲೊಂದಾದ ದೆಪ್ಪುಣಿಗುತ್ತು ಎಂಬಲ್ಲಿ ಈ ಕಾಲೆ ಕೋಲ ನಡೆಯಿತು, ಇಲ್ಲಿನ ಪ್ರಸಿದ್ಧ ನಾಟಿ ವೈದ್ಯೆ ೮೮ರ ಹರೆಯದ ಗಿರಿಜಾ ಎಸ್. ಶೆಟ್ಟಿಯವರು ದೈವಾದೀನರಾಗಿದ್ದು, ಅವರ ಉತ್ತರ ಕ್ರಿಯೆಯ ದಿನ ಗಿರಿಜಾ ಶೆಟ್ಟಿಯವರ ಮಕ್ಕಳು ತಮ್ಮ ತಾಯಿಯ ಅತ್ಮಕ್ಕೆ ಮೋಕ್ಷ ಸಿಗಲೆಂದು ಕಾಲೆ ಕೋಲವನ್ನು ಮಾಡಿದ್ದಾರೆ, ಕಾಲೆ ಕೋಲ ಎಂದರೆ ಸತ್ತು ಹೋದ ವ್ಯಕ್ತಿಯ ಅತ್ಮವು ಪ್ರೇತಾತ್ಮವಾಗಿ ಉಳಿಯಬಾರದು, ಅದಕ್ಕೆ ಮೋಕ್ಷ ಸಿಗಬೇಕೆಂದು ಮಾಡುವ ಆಚರಣೆ ಇದಾಗಿದೆ.
ಇದು ದೈವ ಕೋಲಕ್ಕಿಂತ ಬಿನ್ನವಾಗಿದೆ, ಸತ್ತ ವ್ಯಕ್ತಿಯ ಉತ್ತರಕ್ರಿಯೆಯಂದು ಈ ಕಾಲೆ ಕೋಲವನ್ನು ಆಚರಿಸಲಾಗುದು, ದೈವನರ್ತಕರಾದ ನಲ್ಕೆ ಜನಾಂಗದವರು ಈ ಆಚರಣೆಯಲ್ಲಿ ತೊಡಗುತ್ತಾರೆ ಉತ್ತರಕ್ರಿಯೆ ದಿನ ಬೆಳಿಗ್ಗೆ 5 ಜನ ಈ ಜನಾಂಗದವರು ಒಬ್ಬ ಕುದುರೆ ವೇಷ, ಇನ್ನೋಬ್ಬ ಮೈಗೆ ಕಫ್ಫು ಬಣ್ಣ ಬಳಿದು ನಗ್ನತೆಯ ವೇಷ, ಮತ್ತೆ ಮೂವರು ದೈವದ ಕೋಲದಲ್ಲಿ ಬರೆಯುವಂತೆ ಮುಖವರ್ಣಿಕೆ ಬರೆದು , ಪೋಷಕು ಹಾಕಿ ಕಾಲಿಗೆ ಗಗ್ಗರ ಕಟ್ಟಿ, ತಲೆಗೆ ಅಡಿಕೆ ಮರದ ಹಾಳೆಯ ಅಪ್ಪರಂಬು ಕಟ್ಟಿ ಒಲಗಕ್ಕೆ ತಕ್ಕಂತೆ ನರ್ತಿಸಲು ಪ್ರಾರಂಬಿಸುತ್ತಾರೆ. ಉತ್ತರಕ್ರಿಯೆಯ ಎಂದಿನ ಕ್ರಮದ ಜೊತೆ ಈ ಕಾಲೆ ಕೋಲ ನಡೆಯುತ್ತದೆ.ಈ ಆಚರಣೆಯಲ್ಲಿ ಬಾವನಾತ್ಮಕ ಸಂಭಂದವು ಇದೆ ಅಂದರೆ ಕಾಲೆ ಹಾಕಿದವನು ವೇಷ ಕಳಚುದಕ್ಕೆ ಮುಂಚೆ ಮನೆ ಮಂದಿಯನ್ನು ಕರೆದು ನೀವು ಇನ್ನು ಮುಂದೆ ಯಾವ ರೀತಿ ಜೀವನ ಸಾಗಿಸ ಬೇಕು, ನನ್ನ ನೆನಪನ್ನು ಯಾವ ರೀತಿ ಇಟ್ಟು ಕೊಳ್ಳ ಬೇಕು ಮುಂತಾದ ಸಾಂತ್ವಾನದ ಮಾತುಗಳನ್ನು ಮನೆ ಮಂದಿ ಅಳುವ ರೀತಿಯಲ್ಲಿ ಹೇಳುತ್ತಾನೆ, ಉತ್ತರ ಕ್ರಿಯೆಯ ಕ್ರಮಗಳು ಮುಗಿಯುವಾಗ ಈ ಕಾಲೆ ಕೊಲವು ಮುಗಿಯುತ್ತದೆ, ಇಂತಹ ಎಷ್ಟೋ ಆಚರಣೆಗಳು ಆಧುನಿಕರಣ ಭರಾಟೆಯಲ್ಲಿ ನೇಪಥ್ಯಕ್ಕೆ ಸರಿದಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಅಳಿದು ಹೋದ ಈ ಆಚರಣೆಯನ್ನು ಪುನರಪಿ ಆಚರಿಸಿ, ತನ್ನ ಹಿರಿಯರ ಅತ್ಮಕ್ಕೆ ಚಿರ ಶಾಂತಿಯ ಜೊತೆ, ಸ್ಥಳಿಯರಿಗೆ ಈ ಆಚರಣೆಯ ಅರಿವು ಮೂಡಿಸಿದ ಈ ದೆಪ್ಪುಣಿಗುತ್ತು ಮನೆತನವನ್ನು ಮೆಚ್ಚಲೇ ಬೇಕು.

Nishanth Kilenjooru

Mulkii-16061509 Mulkii-16061510 Mulkii-16061511 Mulkii-16061512 Mulkii-16061513

Comments

comments

Comments are closed.

Read previous post:
Kinnigoli-16061508
ಕಟೀಲು ತಾಳ ಮದ್ದಳೆ ಸಪ್ತಾಹ- 2015 ಉದ್ಘಾಟನೆ

ಕಟೀಲು: ಪುರಾಣಕಥೆಗಳನ್ನು ಯಕ್ಷಗಾನ ತಾಳಮದ್ದಳೆಯ ಮೂಲಕವಾಗಿ ಜನರನ್ನು ಸಂಸ್ಕೃತಿ ಸಂಸ್ಕಾರ ಭರಿರನ್ನಾಗಿಸಲು ಸಾಧ್ಯ ಎಂದು ಕಟೀಲು ದೇವಳದ ಆಡಳಿತಾಽಕಾರಿ ನಿಂಗಯ್ಯ ಹೇಳಿದರು. ಅವರು ಜೂ. 15 ರಂದು...

Close