ಪಾವಂಜೆ ಕೃಷಿ ಜನಪದೋತ್ಸವ

ಪಾವಂಜೆ: ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಜೂ.20 ಶನಿವಾರ ಮತ್ತು ಜೂ. 21  ಭಾನುವಾರದಂದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್‌ನ ಸಂಯೋಜನೆಯಲ್ಲಿ ತುಳುನಾಡ ಕೃಷಿ ಜನಪದೋತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ತಿಳಿಸಿದರು.
ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಕೆ. ಎಸ್. ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕೃಷಿ ಜನಪದೋತ್ಸವ ಸುಮಾರು 21ಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳಸಹಭಾಗಿತ್ವದಲ್ಲಿ ಸಂಪನ್ನಗೊಳ್ಳಲಿದ್ದು ಜೂ 20 ರಂದು ಪ್ರಾಥಮಿಕ ಹಾಗೂ ಫ್ರೌಡ ಶಾಲಾ ಮಕ್ಕಳಿಗೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸ್ಪರ್ದೆಗಳಿವೆ. ಜೂ.21 ರಂದು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿರುವ
ಸ್ಪರ್ಧೆಗೆ ಈ ಬಾರಿ ಪಿರಮಿಡ್ ಆಕಾರದಲ್ಲಿ ಮಡಕೆ ಒಡೆಯುವ ಸ್ಪರ್ಧೆಯನ್ನು ಸೇರಿಸಿಕೊಂಡು ಕೆಸರುಗದ್ದೆ ಓಟ, ಹಿಮ್ಮುಖ ಓಟ, ಹಗ್ಗಜಗ್ಗಾಟ, ನಿಧಿ ಶೋಧ, ಸಮೂಹ ನೃತ್ಯ ಸ್ಪರ್ಧೆ, ಮೂರು ಕಾಲಿನ ಓಟ, ತೆಂಗಿನ ಗರಿ ಹೆಣೆಯುವುದು, ಛಾಯಾಚಿತ್ರ ಸ್ಪರ್ಧೆ, ದಂಪತಿಗಳ ಹಾಗೂ ಹಿರಿಯ ನಾಗರಿಕರ ಓಟ ಹಾಗೂ ಛಾಯ ಚಿತ್ರ ಸ್ಪರ್ಧೆ ಕೂಡಾ ಆಯೋಜಿಸಲಾಗಿದೆ ಎಂದರು.
ವಿನೋದ್ ಸಾಲ್ಯಾನ್ ಬೆಳ್ಳಾಯರು, ನಾರಾಯಣ ರಾವ್, ರಾಮಚಂದ್ರ ಶೆಣೈ, ರಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Kinnigoli-16061501

Comments

comments

Comments are closed.

Read previous post:
Mulkii-15061505
ಡಿ ಪಿ ಅನಂತ್ ಅವರಿಗೆ ಸನ್ಮಾನ

ಮೂಲ್ಕಿ: ರಾಜ, ಮಹಾ ರಾಜರ ಕಾಲದಿಂದಲೂ ತಿರುಪತಿ ಮತ್ತು ಕರ್ನಾಟಕದ ನಡೆವೆ ಅವಿನಾಭಾವ ಸಂಬಂಧ ತಿರುಪತಿಯಲ್ಲಿರುವ ಕರ್ನಾಟಕಕ್ಕೆ ಸೇರಿರುವ ಆಸ್ತಿ ಇದೆ ಇದನ್ನು ಕಬಳಿಸುವ ಯತ್ನ ನಡೆಯುತ್ತಿದ್ದು ಈ...

Close