ಪೊಲೀಸ್ ಸೇವೆಗೆ ಜನಮನ್ನಣೆ ಸಿಗಲಿ

ಮೂಲ್ಕಿ: ಜನಸಾಮಾನ್ಯರ ಸುರಕ್ಷತೆಯ ಜೊತೆ ಜೊತೆಗೆ ಸಂವಿಧಾನ ಬದ್ದ ಕಾನೂನಿನ ಪರಿಪಾಲನೆ ಮಾಡುವ ಪೊಲೀಸರ ಕರ್ತವ್ಯ ಸೇವೆಯು ಜನಮನ್ನಣೆಗೆ ಒಳಗಾದಲ್ಲಿ ಮಾತ್ರ ಇಲಾಖೆಗೆ ಗೌರವ. ವರ್ಗಾವಣೆ ಎನ್ನುವುದು ಆಂತರಿಕ ವ್ಯವಸ್ಥೆ ಆದರೂ ಕೆಲವೊಂದು ಬಾರಿ ವಯಕ್ತಿಕ ಜೀವನಕ್ಕೆ ಅಡ್ಡಿ ಆಗುವುದು ಸಹಜ. ಇದೆಲ್ಲವನ್ನು ನಿಭಾಯಿಸಿಕೊಂಡಲ್ಲಿ ಮಾತ್ರ ಉತ್ತಮ ಕರ್ತವ್ಯ ನಿರ್ವಹಿಸಲು ಸಾಧ್ಯವಿದೆ ಎಂದು ಪಣಂಬೂರು ಎಸಿಪಿ ರವಿಕುಮಾರ್ ಹೇಳಿದರು.
ಮೂಲ್ಕಿ ಆಧಿದನ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಗೊಂಡ 13 ಮಂದಿ ಪೊಲೀಸ್ ಸಿಬ್ಬಂದಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಮಾತನಾಡಿ ಸಮಾಜದ ಎಲ್ಲಾ ಆಯಾಮಗಳಲ್ಲಿಯೂ ತೊಡಗಿಕೊಳ್ಳುವ ಪೊಲೀಸ್ ಸಿಬ್ಬಂದಿಗಳು ನಿಸ್ವಾರ್ಥ ಸೇವೆ ನೀಡಿ ಜನರ ಮೆಚ್ಚುಗೆಗೆ ಪಾತ್ರವಾಗಬೇಕೆಂದರು.
ಪೊಲೀಸ್ ಸಿಬ್ಬಂದಿಗಳಾದ ರವಳೇಂದ್ರ, ಕಾಂತಪ್ಪ, ರಾಮಣ್ಣ ಶೆಟ್ಟಿ, ಧರ್ಮಪ್ಪ, ದೇಜಪ್ಪ, ವಿಜಯ ಕಾಂಚನ್, ಕೃಷ್ಣಪ್ಪ, ಮಾಧವ, ಶರಿಫ್, ಲೋಹಿತ್, ಶೇಖಪ್ಪ, ಪ್ರಶಾಂತ್, ಜಯರಾಮ ಅವರನ್ನು ಗೌರವಿಸಲಾಯಿತು.
ಮೂಲ್ಕಿ ಉಪನಿರೀಕ್ಷಕ ಪರಮೇಶ್ವರ, ಮೂಲ್ಕಿ ಠಾಣೆಯ ವಾಮನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸನ್ಮಾನಿತರಪರವಾಗಿ ರಾಮಣ್ಣ ಶೆಟ್ಟಿ ಕೃತಜ್ಞತೆಯನ್ನು ಸಲ್ಲಿಸಿದರು. ಹೋಮ್‌ಗಾರ್ಡ್ ಕಮಾಂಡೆರ್ ಮನ್ಸೂರು ವಂದಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ನಿರೂಪಿಸಿದರು.

Mulki-17061506 Mulki-17061507

Comments

comments

Comments are closed.

Read previous post:
Pavanje-17061503
ಎರಡು ಕಾರುಗಳು ಮುಖಾಮುಖಿ ಡಿಕ್ಕಿ

ಪಾವಂಜೆ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದು ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಹಳೆಯಂಗಡಿ ಸಮೀಪದ ಪಾವಂಜೆಯಲ್ಲಿ ನಡೆದಿದೆ. ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಹೊಗುತ್ತಿದ್ದ...

Close