ಹಳೆಯಂಗಡಿ: ಚರಂಡಿಗೆ ಉರುಳಿದ ಲಾರಿ

ಮೂಲ್ಕಿ: ಇಲ್ಲಿನ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಇಂದ್ರನಗರ ಎಂಬಲ್ಲಿ ಟಿಪ್ಪರು ಲಾರಿಯೊಂದು ಅಪಘಾತವನ್ನು ತಪ್ಪಿಸಲು ಹೋಗಿ ಚರಂಡಿಗೆ ಉರುಳಿದ ಘಟನೆ ಬುಧವಾರ ಸಂಜೆ ನಡೆದಿದೆ.
ಹಳೆಯಂಗಡಿಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಕಾರೊಂದು ಇಂದ್ರನಗರ ತಲುಪುತ್ತಿದ್ದಂತೆ ರಸ್ತೆಯ ಹೊಂಡವೊಂದನ್ನು ತಪ್ಪಿಸಲು ಚಾಲಕ ಬಲಬದಿಗೆ ತಿರುಗಿಸುತ್ತಿದ್ದ ವೇಳೆ ಎದುರು ಬದಿಯಿಂದ ಬರುತ್ತಿದ್ದ ಟಿಪ್ಪರು ಚಾಲಕ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಟಿಪ್ಪರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಡಿದು ಚರಂಡಿಗೆ ಉರುಳಿದೆ. ಅಪಘಾತದಲ್ಲಿ ಟಿಪ್ಪರು ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ. ಅಪಘಾತದ ಸಂದರ್ಭ ಕೆಲ ಕಾಲ ರಸ್ತೆ ತಡೆ ಉಂಟಾಯಿತು.

Puneethakrishna

Kinnigoli-18061501 Kinnigoli-18061502

Comments

comments

Comments are closed.