ನಿಡ್ಡೋಡಿ ಪುಸ್ತಕ ವಿತರಣೆ

ಕಿನ್ನಿಗೋಳಿ : ಮೂರುಕಾವೇರಿ ಕಮಲಾಕ್ಷಿ ಶ್ರೀಧರ ಆಚಾರ್ಯ ದಂಪತಿಯರ ಸ್ಮರಣಾರ್ಥವಾಗಿ ನಿಡ್ಡೋಡಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಸಮವಸ್ತ್ರಗಳನ್ನು ಐಕಳ ಜಯಪಾಲ ಶೆಟ್ಟಿ ಉದಾರ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಶಾಲಾ ಸಂಚಾಲಕ ಜೋಕಿಂ ಕೊರೆಯ, ಸುಭಾಶ್ಚಂದ್ರ ಮಿತ್ತುಂಜೆ, ಶಿಕ್ಷಕ ಶಾಮ್ ಸುಂದರ ರಾವ್, ಶಿಕ್ಷಕಿಯರಾದ ಪಿ.ಸೌಮ್ಯ, ಶಾರದಾ, ಜ್ಯೋತಿ, ಪ್ರಜ್ಞಾ ಹಾಗೂ ಚಂದ್ರಹಾಸ ಜೋಗಿ ಉಪಸ್ಥಿತರಿದ್ದರು.

Kinnigoli-18061503

Comments

comments

Comments are closed.