ಬಿರುಗಾಳಿ : 25 ಮನೆಗಳಿಗೆ ಹಾನಿ

ಕಿನ್ನಿಗೋಳಿ: ವಿವಿಧೆಡೆ ಸಿಡಿಲ ಅಬ್ಬರದೊಂದಿಗೆ ಶುಕ್ರವಾರ ಬೆಳಿಗ್ಗೆ ಭಾರೀ ಗಾಳಿ ಮಳೆಯಾಗಿದ್ದು ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದ 25 ಕ್ಕೂ ಅಧಿಕ ಮನೆ ತೋಟಗಳಿಗೆ ಹಾನಿ ಸೇರಿದಂತೆ ಅಪಾರ ನಷ್ಟ ಸಂಭವಿಸಿದೆ. ಹಲವಾರು ಮರಗಳು ಧರೆಗುರುಳಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಮುಂಜಾನೆ ಸುಮಾರು 4.20 ಸಮಯ ಬೀಸಿದ ಬಾರಿ ಗಾಳಿ ಮಳೆಗೆ ಕೆರೆಕಾಡು ನಿವಾಸಿ ವಿಜಯಲಕ್ಷ್ಮೀ, ಶೀನ ಮುಂಡಾಳ, ಶಂಕರ, ರವಿ ಆಚಾರ್ಯ, ಬಾಲಕೃಷ್ಣ, ಶೀನ ಮೇಸ್ತ್ರಿ, ಶಿವರಾಮ, ರಾಜೇಂದ್ರ ಆಚಾರ್ಯ, ಜಯಂತಿ ಗೋಪಿನಾಥ್, ಗಣೇಶ್ ಶೆಟ್ಟಿಗಾರ್ ದೊಂಬಯ್ಯ ಶೆಟ್ಟಿಗಾರ್, ಹರೀಶ್ ಶೆಟ್ಟಿಗಾರ್ ಮತ್ತಿತರರ ಮನೆಗಳ ಹೆಂಚು ಸಿಮೆಂಟು ಶೀಟುಗಳು ಹಾರಿಹೋಗಿವೆ.
ಶೀನಾ ಮುಗೇರ ಅವರ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಕೆಲವರ ಕೊಟ್ಟಿಗೆಗಳು ಭಾಗಶಃ ಹಾನಿಯಾಗಿದೆ. ಮನೆಯೊಂದರ ತೆಂಗಿನ ಮರವೊಂದು ಗಾಳಿಯ ರಭಸಕ್ಕೆ ಸಂಪೂರ್ಣ ತುಂಡಾಗಿ ಪಕ್ಕಕ್ಕೆ ಬಿದ್ದಿದೆ.
ಧರೆಗುರುಳಿದ ಮರಗಳು: ಹಲವು ಮನೆಗಳ ಮುಂದಿದ್ದ ಹಲಸಿನ ಮರ, ಮಾವಿನ ಮರ, ತೆಂಗಿನ ಮರಗಳು ಬಿದ್ದು ಹಾನಿಯುಂಟಾಗಿದೆ.
ಹಂಚುಗಳು ಹಾರಿಹೋಗಿವೆ: ಬಹುತೇಕ ಮನೆಗಳ ಹೆಂಚುಗಳು, ಸಿಮೆಂಟು ಶೀಟುಗಳು ಹಾರಿಹೋಗಿದ್ದು ಕೆಲವರ ಮನೆಗಳ ಶೀಟುಗಳೇ ನಾಪತ್ತೆಯಾಗಿದ್ದರೆ ಕೆಲವರ ಮನೆಗಳ ಶೀಟುಗಳು ಪುಡಿಪುಡಿಯಾಗಿದೆ.
ಮನೆಗಳ ಮೇಲೆ ಬಿದ್ದ ಮರಗಳನ್ನು ಸಾರ್ವಜನಿಕರು ತೆರವುಗೊಳಿಸಿದರು. ಬಿರುಗಾಳಿಯಿಂದಾಗಿ ಕೆಲವು ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು ಹಲವಾರು ವಿದ್ಯುತ್ ವಯರ್‌ಗಳು ಹಾನಿಗಿಡಾಗಿವೆ.
ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕುಮುದ ಅವರ ಬಾಡಿಗೆ ಮನೆಯಲ್ಲಿದ್ದ ಹರೀಶ್ ಶೆಟ್ಟಿಗಾರ್ ಅವರ ಮನೆಗೆ ಮರ ಬಿದ್ದು ಮನೆಯವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ.
ಗ್ರಾಮಕರಣಿಕ ವಿ ವೆಂಕಟೇಶ್, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಹಾಗೂ ಜನ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Kinnigoli-19061502 Kinnigoli-19061503 Kinnigoli-19061504 Kinnigoli-19061505 Kinnigoli-19061506 Kinnigoli-19061507 Kinnigoli-19061508 Kinnigoli-19061509 Kinnigoli-19061510 Kinnigoli-19061511 Kinnigoli-19061512 Kinnigoli-19061513 Kinnigoli-19061514

Comments

comments

Comments are closed.