ಪುನರೂರು ಕೆರೆಗೆ ಬಿದ್ದು ಮೃತ್ಯು

ಕಿನ್ನಿಗೋಳಿ: ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರೂರು ಬಳಿಯ ಕೆರೆವೊಂದಕ್ಕೆ ಯುವಕನೋರ್ವ ಬಿದ್ದು ಮೃತ ಪಟ್ಟ ಘಟನೆ ಶನಿವಾರ ಮದ್ಯಾಹ್ನ ನಡೆದಿದೆ.
ಮೂಲ್ಕಿ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ನಿವಾಸಿ ಲಕ್ಮಣ ಹಾಗೂ ಕಸ್ತೂರಿ ದಂಪತಿಗಳ ಪುತ್ರ ಚಂದ್ರು (18 ವರ್ಷ) ಪುನರೂರಿನಲ್ಲಿ ಕೆಲಸಕ್ಕಾಗಿ ಬಂದಿದ್ದು ಮಧ್ಯಾಹ್ನದ ಹೊತ್ತಿಗೆ ಊಟಕ್ಕೆ ಹೋಗುವಾಗ ಕೆರೆಯಲ್ಲಿ ಕಾಲು ತೊಳೆಯಲು ಇಳಿದಾಗ ಮುಳುಗಿ ಮೃತ ಪಟ್ಟಿರುವುದಾಗಿ ಜೊತೆಯಲ್ಲಿದ್ದ ಸಂತೋಷ್ ಹನುಮಂತ ವೆಂಕಟೇಶ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಹಾಗೂ ಮುಳುಗು ತಜ್ಞರು ಮೃತ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸಿ ಅಶೋಕ್ ಭೇಟಿ ನೀಡಿದ್ದಾರೆ. ಮುಲ್ಕಿ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Kinnigoli-20161506 Kinnigoli-20161507

Comments

comments

Comments are closed.

Read previous post:
Kinnigoli-20161505
ಕಿನ್ನಿಗೋಳಿ ಬಿಜೆಪಿ ಮಹಾ ಸಂಪರ್ಕ ಅಭಿಯಾನ

ಕಿನ್ನಿಗೋಳಿ: ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಕಿನ್ನಿಗೋಳಿಯಲ್ಲಿ ಬಿಜೆಪಿ ಸದಸ್ಯತ್ವದ ಬಿಜೆಪಿ ಮಹಾ ಸಂಪರ್ಕ ಅಭಿಯಾನಕ್ಕೆ ಗೋಳಿಜೋರದ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರ ಮನೆಯಲ್ಲಿ...

Close