ಪುನರೂರು : ಬೈಕ್ ಸವಾರರಿಗೆ ಗಾಯ

ಕಿನ್ನಿಗೋಳಿ: ಮೂಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಪುನರೂರು ದ್ವಾರದ ಬಳಿಯಲ್ಲಿ ಶುಕ್ರವಾರ ರಾತ್ರಿ 8.30ರ ವೇಳೆಗೆ ಭಾರೀ ಗಾಳಿ-ಮಳೆಗೆ ಮರವೊಂದು ರಸ್ತೆಗೆ ಬುಡ ಸಮೇತ ಉರುಳಿ ಬಿದ್ದು ಸುಮಾರು ಒಂದು ಗಂಟೆ ರಸ್ತೆ ಸಂಚಾರಕ್ಕೆ ಅಡೆತಡೆಯಾಯಿತು.
ಬೈಕ್ ಸವಾರರಿಬ್ಬರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಮರದಡಿಗೆ ಸಿಲುಕಿ ಗಾಯಗೊಂಡಿದ್ದಾರೆ. ಗಾಯಗೊಂಡ ಪರ್ವೇಜ್ ಮತ್ತು ರೆಹಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಸ್ಕಾಂ ಸಿಬ್ಬಂದಿ ಮತ್ತು ಪುನರೂರು ಫ್ರೆಂಡ್ಸ್ ಸಂಘದವರು ಕಾರ್ಯಾಚರಣೆ ನಡೆಸಿ ಶೀಘ್ರ ಮರವನ್ನು ತೆರವು ಗೊಳಿಸಿದರು. ಸದಾಶಿವ ಶೆಟ್ಟಿಗಾರ್ ಅವರ ಅಂಗಡಿ ಛಾವಣಿಯ ಶೀಟ್‌ಗಳು ರಸ್ಥೆಯ ಇನ್ನೊಂದು ಭಾಗಕ್ಕೆ ಹಾರಿಹೋಗಿವೆ.

Kinnigoli-20161503

Comments

comments

Comments are closed.

Read previous post:
Kinnigoli-22061515
ರಂಝಾನ್ ಕಿಟ್ ವಿತರಣೆ

ಕಿನ್ನಿಗೋಳಿ : ರಂಝಾನ್ ತಿಂಗಳ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಶಾಖಾ ವತಿಯಿಂದ 20 ಬಡ ಕುಟುಂಬಗಳಿಗೆ...

Close