ಕೆರೆಕಾಡು ಪರಿಹಾರ ವಿತರಣೆ

ಕಿನ್ನಿಗೋಳಿ: ಸರಕಾರ ಹಾಗೂ ಜಿಲ್ಲಾಡಳಿತ ಮಳೆಹಾನಿಗೆ ಒಳಗಾದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಪರಿಹಾರದ ಮೊತ್ತ ನೀಡುತ್ತದೆ ದುರಸ್ತಿಗಾಗಿ ಮಾತ್ರ ಸದ್ಬಳಕೆ ಮಾಡಿಕೊಳ್ಳಿ ಎಂದು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದಲ್ಲಿ ಶುಕ್ರವಾರ ಮುಂಜಾನೆ ಬೀಸಿದ ಬಿರುಗಾಳಿ ಹಾಗೂ ಭಾರಿ ಮಳೆಗೆ ೨೯ ಮನೆಗಳಿಗೆ ಹಾನಿಯಾಗಿದ್ದು, ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿ ಮೂರು ಲಕ್ಷದ ತೊಂಬತ್ತು ಸಾವಿರದ ಇನ್ನೂರು (390200) ರೂಗಳ ಪರಿಹಾರ ಚೆಕ್ ಅನ್ನು ಶನಿವಾರ ವಿತರಿಸಿ ಮಾತನಾಡಿದರು.
ಹೆಚ್ಚಿನ ಹಾನಿ ಸಂಭವಿಸಿದ ವಿಜಯಲಕ್ಷ್ಮೀ ಹಾಗೂ ಶಂಕರ ಅವರಿಗೆ ತಲಾ 95,000 ರೂ. ಹಾಗೂ ಭಾಗಶಃ ಹಾನಿಗೊಂಡ ಬಾಲಕೃಷ್ಣ ಅವರಿಗೆ 65,000 ರೂ., ಮತ್ತು ಇತರ 26 ಮಂದಿಗೆ ತಲಾ 5,200 ರೂ.ಗಳ ಚೆಕ್ಕನ್ನು ಸ್ಥಳದಲ್ಲೇ ಖುದ್ದಾಗಿ ವಿತರಿಸಿದರು.
ಸಹಾಯಕ ಕಮಿಷನರ್ ಅಶೋಕ್, ಉಪತಹಶೀಲ್ದಾರ್ ಎ.ಜೆ. ಖೇಣಿ, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಕಿಲ್ಪಾಡಿ ಗ್ರಾಮಕರಣಿಕ ವೆಂಕಟೇಶ್ ಪೈ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಉಪಸ್ಥಿತರಿದ್ದರು.

Kinnigoli-21061502

Comments

comments

Comments are closed.

Read previous post:
Kateel-21061501
ಕೆರೆಕಾಡು ನಳಿನ್‌ಕುಮಾರ್ ಭೇಟಿ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದಲ್ಲಿ ಶುಕ್ರವಾರ ಮುಂಜಾನೆ ಬಿರುಗಾಳಿಗೆ ಹಾನಿಯಾದ ಮನೆಗಳಿಗೆ ಶನಿವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಭೇಟಿ...

Close