ಕೆರೆಕಾಡು ಬಳಿ ರಾಜ್ಯ ಹೆದ್ದಾರಿಗೆ ಬಿದ್ದ ಮರ

ಕಿನ್ನಿಗೋಳಿ: ಕಿನ್ನಿಗೋಳಿ-ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಕುಕ್ಕುದಕಟ್ಟೆ ಬಳಿ ಭಾನುವಾರ ಬೆಳಿಗ್ಗೆ ಗಾಳಿ ಮಳೆಗೆ ದೊಡ್ಡ ದೂಪದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಮೈನ್ ಲೈನ್ ವಿದ್ಯುತ್ ತಂತಿಯ ಮೇಲೆ ಬಿದ್ದುದರಿಂದ ವಿದ್ಯುತ್ ಸರಬರಾಜು ಸ್ಥಗಿತ ಗೊಂಡಿದೆ. ನಾಲ್ಕು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ವಾಹನಗಳು ಪರ್ಯಾಯ ಮಾರ್ಗವಾಗಿ ಕೆರೆಕಾಡು ರಸ್ತೆಯ ಮೂಲಕ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿತ್ತು. ಸ್ಥಳಕ್ಕೆ ಮೆಸ್ಕಾಂನ ಇಲಾಖಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿ ಮರ ತೆರವು ಮಾಡುವಲ್ಲಿ ಸಹಕರಿಸಿದರು.

Kinnigoli-21061503

Comments

comments

Comments are closed.

Read previous post:
Kinnigoli-21061502
ಕೆರೆಕಾಡು ಪರಿಹಾರ ವಿತರಣೆ

ಕಿನ್ನಿಗೋಳಿ: ಸರಕಾರ ಹಾಗೂ ಜಿಲ್ಲಾಡಳಿತ ಮಳೆಹಾನಿಗೆ ಒಳಗಾದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಪರಿಹಾರದ ಮೊತ್ತ ನೀಡುತ್ತದೆ ದುರಸ್ತಿಗಾಗಿ ಮಾತ್ರ ಸದ್ಬಳಕೆ ಮಾಡಿಕೊಳ್ಳಿ ಎಂದು ಸಚಿವ ಕೆ. ಅಭಯಚಂದ್ರ...

Close