ಮೂರುಕಾವೇರಿ ನೂತನ ಶಾಖೆ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ರೈತರಿಗೆ, ವ್ಯಾಪಾರಿಗಳು, ನಾಗರೀಕರಿಗೆ ಅನುಕೂಲವಾಗುವ ಉದ್ದೇಶದಿಂದ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭವಿಷ್ಯದ ಅಭಿವೃದ್ದಿ ನೆಲೆಯಲ್ಲಿ ಸಾಲ ಪಡೆದು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಶಾಂತಿನಗರ ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ ಹೇಳಿದರು.
ಕಿನ್ನಿಗೋಳಿ ಸ್ವರ್ಣ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಗುತ್ತಕಾಡು ಶಾಂತಿ ನಗರ ಇದರ ನೂತನ ಮೂರುಕಾವೇರಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ಅಶೋಕ್ ರಾಯನ್ ಕ್ರಾಸ್ತ, ಕಿನ್ನಿಗೋಳಿ ಜುಮ್ಮಾ ಮಸೀದಿ ಖತೀಬರು ಅಬ್ದುಲ್ ಲತೀಫ್ ಸಖಾಫಿ, ಬಜಪೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಸ್ವರ್ಣ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಟಿ.ಎ. ಹನೀಫ್, ಕಾರ್ಯದರ್ಶಿ ಭವಾನಿ, ಆಡಳಿತ ನಿರ್ದೇಶಕರಾದ ವಿನ್ನಿ ಡಿಸೋಜ, ಹೇಮಲತಾ ಭಂಡಾರಿ, ಸುಂದರ, ಬಾಲಕೃಷ್ಣ ಡಿ ಸಾಲ್ಯಾನ್, ಕುಶಲ ಪೂಜಾರಿ ಹರೀಶ್ ಸಾಲ್ಯಾನ್ ಉಪಸ್ಥಿತರಿದ್ದರು.

ಸ್ವರ್ಣ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ದಿವಾಕರ ಕರ್ಕೆರ ಕಾರ್ಯಕ್ರಮ ನಿರೂಪಿಸಿದರು.

Kinnigoli-22061502

Comments

comments

Comments are closed.

Read previous post:
Kinnigoli-22061501
ತೋಕೂರು ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ

ಕಿನ್ನಿಗೋಳಿ: ಏನೂ ಕೊಟ್ಟರೂ ಒಬ್ಬರ ಜೀವ ಉಳಿಸುವುದು ಅಸಾಧ್ಯ, ಕೊನೆಯ ಪಕ್ಷ ರಕ್ತದಾನದ ಮೂಲಕ ನಮ್ಮ ಸಹಜೀವಿಗಳ ಪ್ರಾಣವನ್ನು ಉಳಿಸಬಹುದು ಎಂದು ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ವೆನ್‌ಲಾಕ್...

Close