ತೋಕೂರು ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರ

ಕಿನ್ನಿಗೋಳಿ: ಏನೂ ಕೊಟ್ಟರೂ ಒಬ್ಬರ ಜೀವ ಉಳಿಸುವುದು ಅಸಾಧ್ಯ, ಕೊನೆಯ ಪಕ್ಷ ರಕ್ತದಾನದ ಮೂಲಕ ನಮ್ಮ ಸಹಜೀವಿಗಳ ಪ್ರಾಣವನ್ನು ಉಳಿಸಬಹುದು ಎಂದು ರಕ್ತನಿಧಿ ಕೇಂದ್ರ ಜಿಲ್ಲಾ ಸರಕಾರಿ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿ ಡಾ| ಶರತ್ ಕುಮಾರ್ ಹೇಳಿದರು.
ತಪೋವನ ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ, ಎನ್.ಇ.ಟಿ ರೋವರ್ಸ್, ರೋಟರಿ ಕ್ಲಬ್, ಮುಲ್ಕಿ, ವೆನ್ಲಾಕ್ ಜಿಲ್ಲಾ ರಕ್ತಪೂರಣ ಕೇಂದ್ರ, ಜಿಲ್ಲಾ ಸರಕಾರಿ ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ದ.ಕ. ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಆಸೋಸಿಯೇಷನ್ ಮುಲ್ಕಿ ವಲಯ, ಯುವಕ ಸಂಘ ತೋಕೂರು, ಕುಲಾಲ ಸಂಘ, ತೋಕೂರು, ಕಾರ್ನಾಡ್ ಯಂಗ್‌ಸ್ಟಾರ್ ಅಸೋಸಿಯೇಷನ್, ಕಾರ್ನಾಡು, ಮುಲ್ಕಿ, ಆರ್‌ಸಿಸಿ ತೋಕೂರು ಮತ್ತು ನಡಿಕುದ್ರು, ಕೆಥೋಲಿಕ್ ಸಭಾ ಮುಲ್ಕಿ ಮತ್ತು ಯುವವಾಹಿನಿ ಮುಲ್ಕಿ ಮತ್ತು ನಿಟ್ಟೆ ವಿದ್ಯಾ ಸಂಸ್ಥೆ, ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ನಡೆದ 16ನೇ ವರ್ಷದ ರಕ್ತ ವರ್ಗೀಕರಣ ಮತ್ತು ರಕ್ತದಾನ ಶಿಬಿರದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ರವಿಚಂದ್ರ ವಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ ನವೀನ್ ಕುಮಾರ್ ಕಟೀಲು, ರಘುರಾಮ್ ರಾವ್, ಜಗದೀಶ ಶೆಟ್ಟಿ, ಬಿ. ದುರ್ಗಾಪ್ರಸಾದ್ ಶೆಟ್ಟಿ, ಎಚ್. ಸತೀಶ್ ಕುಮಾರ್, ಶ್ರೀಧರ ಬಂಗೇರ, ದೀಪಕ್ ವಿ. ಕೋಟ್ಯಾನ್, ಜೆಸಿಂತಾ ಸಿ. ಡಿಸೋಜಾ ಉಪಸ್ಥಿತರಿದ್ದರು.

ಐಟಿಐ ಸಂಸ್ಥೆಯ ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಸ್ವಾಗತಿಸಿ, ಸುರೇಶ್ ಎಸ್ ವಂದಿಸಿದರು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಮತ್ತು ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಂದ ಸುಮಾರು 75 ಯುನಿಟ್ ಗಿಂತಲೂ ಹೆಚ್ಚು ರಕ್ತ ಸಂಗ್ರಹ ಮಾಡಲಾಯಿತು.

Kinnigoli-22061501

Comments

comments

Comments are closed.

Read previous post:
Kinnigoli-21061504
ಕೆರೆಕಾಡು – ಪರಿಹಾರ ವಿತರಣೆ

ಕಿನ್ನಿಗೋಳಿ : ಅಂತಾರಾಷ್ಟ್ರೀಯ ವಾಸ್ತುತಜ್ಞ ಬೆಂಗಳೂರು ಆರ್.ಟಿ. ನಗರದ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ಪತ್ನಿ ರಜನಿ ಚಂದ್ರಶೇಖರ್ ಬಿರುಗಾಳಿ ಮಳೆಯಿಂದ ಹಾನಿಗೀಡಾದ ಕೆರೆಕಾಡು ಪರಿಸರದ ಮನೆಗಳಿಗೆ...

Close