ಕಿನ್ನಿಗೋಳಿಯಲ್ಲಿ ಕಂದಾಯ ಅದಾಲತ್

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನರಿಗೆ ತಾಲೂಕು ಕೇಂದ್ರಗಳ ಅಲೆದಾಟ ಹಾಗೂ ಆರ್ಥಿಕ ಹೊರೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಕಂದಾಯ ಅದಾಲತ್‌ನ್ನು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಲ್ಕಿ ನಾಡ ಕಛೇರಿಯ ಉಪತಹಸೀಲ್ದಾರ್ ಪುಷ್ಪರಾಜ್ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಮುಲ್ಕಿ ಹೋಬಳಿ ಮಟ್ಟದ ಕಂದಾಯ ಅದಾಲತ್ ಸಭೆಯಲ್ಲಿ ಮಾತನಾಡಿದರು.
ಕಂದಾಯ ಅದಾಲತ್‌ನಲ್ಲಿ ಸಾರ್ವಜನಿಕರು ಪಹಣಿಯಲ್ಲಿ ಆಗಿರುವ ದೋಷ ಸರಿಪಡಿಸಿಕೊಳ್ಳಬಹುದಾಗಿದ್ದು, ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಕಾರ್ಯ ಕೈಗೊಂಡಿದ್ದು ಪ್ರತಿಯೊಂದು ಗ್ರಾಮಪಂಚಾಯತ್‌ನಲ್ಲಿ ಕಂದಾಯ ಅದಾಲತ್‌ಗಳನ್ನು ಹಮ್ಮಿಕೊಳ್ಳುವ ಮೂಲಕ ಕಂದಾಯ ಇಲಾಖೆಯನ್ನು ಗ್ರಾಮದ ಮನೆ ಬಾಗಿಲಿಗೆ ತರುತ್ತಿದೆ ಎಂದರು.
ಅದಾಲತ್‌ನಲ್ಲಿ ತಿದ್ದುಪಡಿ, ಹಾಗೂ ಪೋಡಿಗೆ ಸಂಬಂಧಿಸಿದ ಅರ್ಜಿದಾರರ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು.
ಸಭೆಯಲ್ಲಿ ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಒಲಿವರ್ ಪಿಂಟೊ, ಗ್ರಾಮ ಕರಣಿಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.

Kinnigoli-23061501

Comments

comments

Comments are closed.

Read previous post:
Kinnigoli-22061529
ಪಾವಂಜೆ ಕೆಸರು ಗದ್ದೆ ಕ್ರೀಡೊತ್ಸವ 2

ಪಾವಂಜೆ:  ಕೆಸರು ಗದ್ದೆ ಕ್ರೀಡೊತ್ಸವ 2 Sunil Bangera  

Close