ಧನಾತ್ಮಕ ಚಿಂತನೆ ವ್ಯಕ್ತಿತ್ವವಿಕಸನದ ಮೆಟ್ಟಿಲು

ಕಿನ್ನಿಗೋಳಿ: ಪ್ರತೀಯೊಬ್ಬ ವ್ಯಕ್ತಿಯಲ್ಲಿ ಮಾರ್ಗದರ್ಶನ, ವಿಮರ್ಶಾತ್ಮಕ ಚಿಂತನೆ, ಮತ್ತು ಸಾಧಿಸುವ ಛಲ ಬಂದಾಗ ವ್ಯಕ್ತಿತ್ವದಲ್ಲಿ ಧನಾತ್ಮಕ ಚಿಂತನೆ ಮತ್ತು ಜೀವನಮೌಲ್ಯಗಳು ವಿಕಸನಗೊಳ್ಳುತ್ತದೆ. ಎಂದು ಬೆಳ್ಮಣ್ ಸಂತ ಜೋಸೆಫ್ ಶಾಲಾ ಹಿರಿಯ ಶಿಕ್ಷಕ, ವಿಮರ್ಶಕ ಬಿ.ಪುಂಡಲೀಕ ಮರಾಠೆ ಶಿರ್ವ ಹೇಳಿದರು.
ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಪದವಿ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ ಜ್ಞಾನವನ್ನು ವೃದ್ಧಿಸುತ್ತದೆ,ಮೌಲ್ಯಗಳು ಅದನ್ನು ಪ್ರಕಾಶಿಸುವಂತೆ ಮಾಡುತ್ತವೆ. ಸಮಾಜಮುಖಿ ಚಿಂತನೆಗಳನ್ನು ಬೆಳೆಸಿ, ನಮ್ಮ ಪ್ರತಿಭೆ,ಜ್ಞಾನ,ಶ್ರಮ, ಸಾಮರ್ಥ್ಯವನ್ನು ಸಮಾಜದ ಉನ್ನತಿಗಾಗಿ ಅರ್ಪಿಸಿದಾಗ ಸಾಮಾನ್ಯ ಮಾನವ ವಿಶ್ವಮಾನವನಾಗುತ್ತಾನೆ ಎಂದರು.
ಪೊಂಪೈ ಕಾಲೇಜು ಪ್ರಾಂಶುಪಾಲ ಡಾ. ಜೆ.ಸಿ. ಮಿರಾಂದ, ಮೈಕಲ್ ಪಿಂಟೊ ಉಪಸ್ಥಿತರಿದ್ದರು.

Kinnigoli-23061502

Comments

comments

Comments are closed.

Read previous post:
Kinnigoli-23061501
ಕಿನ್ನಿಗೋಳಿಯಲ್ಲಿ ಕಂದಾಯ ಅದಾಲತ್

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನರಿಗೆ ತಾಲೂಕು ಕೇಂದ್ರಗಳ ಅಲೆದಾಟ ಹಾಗೂ ಆರ್ಥಿಕ ಹೊರೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಕಂದಾಯ ಅದಾಲತ್‌ನ್ನು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಲ್ಕಿ...

Close