ಭಜನಾ ಮಂದಿರ ಧನಸಹಾಯ

ಕಿನ್ನಿಗೋಳಿ: ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಕಿನ್ನಿಗೋಳಿ ಸಮೀಪದ ಕಮ್ಮಾಜೆ ನೇಕಾರ ಕಾಲನಿ ದುರ್ಗಾ ಭಜನಾ ಮಂದಿರಕ್ಕೆ ಐವತ್ತು ಸಾವಿರ ಕೊಡುಗೆಯನ್ನು ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸುಧೀರ್ ಕುಮಾರ್ ಭಜನಾ ಮಂದಿರದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ರಾಘವ ಎಂ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಜನಜಾಗೃತಿ ವೇದಿಕೆಯ ಕರುಣಾಕರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್, ಮೆನ್ನಬೆಟ್ಟು ಒಕ್ಕೂಟದ ಸ್ವಸಹಾಯ ಸಂಘದ ಪಧಾಧಿಕಾರಿಗಳು, ಸೇವಾ ಪ್ರತಿನಿಧಿ ಶೈಲಾ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಚೇತನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-24061501

Comments

comments

Comments are closed.

Read previous post:
Kinnigoli-23061502
ಧನಾತ್ಮಕ ಚಿಂತನೆ ವ್ಯಕ್ತಿತ್ವವಿಕಸನದ ಮೆಟ್ಟಿಲು

ಕಿನ್ನಿಗೋಳಿ: ಪ್ರತೀಯೊಬ್ಬ ವ್ಯಕ್ತಿಯಲ್ಲಿ ಮಾರ್ಗದರ್ಶನ, ವಿಮರ್ಶಾತ್ಮಕ ಚಿಂತನೆ, ಮತ್ತು ಸಾಧಿಸುವ ಛಲ ಬಂದಾಗ ವ್ಯಕ್ತಿತ್ವದಲ್ಲಿ ಧನಾತ್ಮಕ ಚಿಂತನೆ ಮತ್ತು ಜೀವನಮೌಲ್ಯಗಳು ವಿಕಸನಗೊಳ್ಳುತ್ತದೆ. ಎಂದು ಬೆಳ್ಮಣ್ ಸಂತ ಜೋಸೆಫ್ ಶಾಲಾ...

Close