ಜಂಕ್ಷನ್’ಗೆ ಪೋಲಿಸರಿಂದ ತಾತ್ಕಾಲಿಕ ಪರಿಹಾರ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳುವಾಗ ಹಳೆಯಂಗಡಿ ಜಂಕ್ಷನ್ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಗ್ಗೆ ಅನೇಕ ಬಾರಿ ಪತ್ರಿಕೆಯಲ್ಲಿ ಪ್ರಕಟವಾದರೂ ಹೆದ್ದಾರಿ ಇಲಾಖೆಯಾಗಲೀ ಸ್ಥಳೀಯ ಸಂಸದರಾಗಲೀ ಅಥವಾ ಈ ಭಾಗದ ಶಾಸಕರಾಗಲೀ ಎಚ್ಚೆತ್ತುಕೊಳ್ಳದಿದ್ದರೂ ಮಂಗಳೂರು ಉತ್ತರಠಾಣೆಯ ಪೋಲೀಸರು ತಾತ್ಕಾಲಿಕ ಪರಿಹಾರ ಕಂಡುಕೊಂಡು ಪ್ರಯಾಣಿಕರಿಂದ ಹಾಗೂ ಸ್ಥಳೀಯರಿಂದ ಶ್ಲಾಘನೆಗೆ ಕಾರಣರಾಗಿದ್ದಾರೆ.
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಿಸಲು ಬ್ಯಾರಿಕೇಡರ್‌ಗಳನ್ನು ಅಳವಡಿಸಲಾಗಿದೆ. ಸುಮಾರು 20ರವರೆಗೆ ಬ್ಯಾರಿಕೆಡರುಗಳನ್ನು ಅಳವಡಿಸಿ ಅತೀವೇಗ ಹಾಗೂ ನಿರ್ಲ್ಯಕ್ಷತೆಯಿಂದ ವಾಹನ ಚಲಾಯಿಸುವ ಚಾಲಕರಿಗೆ ಮೂಗುದಾರ ತೊಡಿಸಿದ್ದಾರೆ. ಕಿನ್ನಿಗೋಳಿಗೆ ತೆರಳುವ ಬಸ್ಸುಗಳ ನಿಲ್ದಾಣವನ್ನೇ ಬದಲಿಸಲಾಗಿದೆ. ಪಾದಾಚಾರಿಗಳಿಗೆ ಆರಾಮವಾಗಿ ದಾಟುವಂತೆ ಒರ್ವ ಪೋಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಹಳೆಯಂಗಡಿ ಪೇಟೆಯು ಅಭಿವೃದ್ದಿ ಹೊಂದುತ್ತಿದ್ದು , ಮೂಲಭೂತ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.ಇಲ್ಲಿನ ಇಂದ್ರನಗರ ರೈಲ್ವೇ ಕ್ರಾಸಿಂಗ್ ನಲ್ಲಿಯೂ ನಿಮಿಷಕ್ಕೊಂದರಂತೆ ಕಿನ್ನಿಗೋಳಿಗೆ ಹೋಗುವ ಹಾಗೂ ಬರುವ ಬಸ್ಸುಗಳ ನಾಗಾಲೋಟದಿಂದ ಸ್ಥಳೀಯರು ಅನೇಕ ಬಾರಿ ರೈಲ್ವೆ ಕ್ರಾಸಿಂಗ್‌ಗೆ ಫ್ಲೈಒವರ್ ನೇಮಿಸುವಂತೆ ಸಂಸದರೊಡನೆ ಒತ್ತಾಯಿಸಿದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹೆದ್ದಾರಿಯಲ್ಲೂ ಫ್ಲೈಓವರ್ ಮತ್ತು ತಾತ್ಕಾಲಿಕ ನೆಲೆಯಲ್ಲಿ ಝೀಬ್ರಾ ಕ್ರಾಸಿಂಗ್ ಅಳವಡಿಸುವಂತೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Puneethkrishna

Mulki-30061502 Mulki-30061503

Comments

comments

Comments are closed.

Read previous post:
Mulki-30061501
ಖಾಸಗಿ ಸ್ಥಳದಲ್ಲಿರುವ ಶಿಯಾಳ ತಿಪ್ಪೆ ರಾಶಿ

ಮೂಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪನಾಡು - ಏಳಿಂಜೆ ರಸ್ತೆಯ ಕವಾತ್ತಾರು ಗುಡ್ಡೆಯಂಗಡಿ ಬಸ್ಸು ನಿಲ್ದಾಣದ ಬಳಿ ಕೆಲ ದುಷ್ಕರ್ಮಿಗಳು ಶಿಯಾಳ ತಿಪ್ಪೆಯನ್ನು ಖಾಸಗಿ ಜಾಗದಲ್ಲಿ...

Close