ಕಟೀಲು ಉಚಿತ ಯೋಗ ಶಿಬಿರ

ಕಿನ್ನಿಗೋಳಿ: ವಿಶ್ವ ಯೋಗ ದಿನದ ಅಂಗವಾಗಿ ಪತಂಜಲಿ ಯೋಗ ಸಮಿತಿ ಮೂಡಬಿದಿರೆ ಸಂಯೋಜನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಒಂದು ವಾರದ ಉಚಿತ ಯೋಗ ತರಬೇತಿ ಶಿಬಿರವನ್ನು ದೇವಳದ ಮೊಕ್ತೇಸರ ವೇದಮೂರ್ತಿ ವಾಸುದೇವ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣರವರು ಆಶೀರ್ವಚನವಿತ್ತರು. ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿ ಮೂಡಬಿದಿರೆ ವಲಯದ ಅಧ್ಯಕ್ಷರಾದ ಶ್ರೀ ಯು. ಪದ್ಮನಾಭ ಶೆಟ್ಟಿ, ಸಂಸ್ಥೆಯ ಪ್ರಾಚಾರ‍್ಯರಾದ ಪ್ರೊ. ಜಯರಾಮ ಪೂಂಜ ಹಾಗೂ ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕರಾದ ಶ್ರೀ ಶಂಕರ ಮರಾಠೆ ಹಾಗೂ ಡಾ| ಕೇಶವ ಹೆಗ್ಡೆಯವರು ಉಪಸ್ಥಿತರಿದ್ದರು. ಬಾಬಾ ರಾಮ್‌ದೇವ್‌ಜೀರವರ ಶಿಷ್ಯರಾದ ಶ್ರೀ ಶರತ್ ಮತ್ತು ಶ್ರೀ ಹರಿಪ್ರಸಾದ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳು ಯೋಗತರಬೇತಿ ಕಾರ‍್ಯಾಗಾರದಲ್ಲಿ ಭಾಗವಹಿಸುವುದರೊಂದಿಗೆ ಯೋಗದ ಮಹತ್ವವನ್ನು ಪಡೆದುಕೊಂಡರು.
ಸಂಸ್ಥೆಯ ಪ್ರಾಚಾರ‍್ಯ ಸ್ವಾಗತಿಸಿ, ಉಪನ್ಯಾಸಕರಾದ ಡಾ| ಕೇಶವ ಹೆಗ್ಗಡೆಯವರು ಧನ್ಯವಾದವಿತ್ತರು. ಶ್ರೀಯುತ ಶಂಕರ ಮರಾಠೆಯವರು ಕಾರ‍್ಯಕ್ರಮ ನಿರ್ವಹಿಸಿದರು.

Kinnigoli-01071503

Comments

comments

Comments are closed.

Read previous post:
Kinnigoli-01071501
ತೋಕೂರು – ಅಧ್ಯಕ್ಷರಾಗಿ ಜಗದೀಶ್ ಕುಮಾರ್

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ೨೦೧೫-೧೬ ನೇ ಸಾಲಿನ ಅಧ್ಯಕ್ಷರಾಗಿ ಜಗದೀಶ್ ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷ ಶೇಖರ ಎಸ್. ಪೂಜಾರಿ, ಕಾರ್ಯದರ್ಶಿ ಜಗದೀಶ ಕುಲಾಲ್,...

Close