ಕಟೀಲು ಕಾಲೇಜು ಎನ್‌ಎಸ್‌ಎಸ್ ಉದ್ಘಾಟನೆ

ಕಿನ್ನಿಗೋಳಿ: ಯೋಗದಿಂದ ಅನಾರೋಗ್ಯ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆಂಚನಕೆರೆಯ ಯೋಗ ಸಾಧಕ ಜಯ ಶೆಟ್ಟಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದಜೆ ಕಾಲೇಜು ಎನ್‌ಎಸ್‌ಎಸ್ ಘಟಕದ ಈ ಸಾಲಿನ ಚಟುವಟಿಕೆಗಳ ಉದ್ಘಾಟನೆಯನ್ನು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ತಿಳಿ ಹೇಳುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ, ಕಿನ್ನಿಗೋಳಿಯ ಉದ್ಯಮಿ ಶ್ರೀಕಾಂತ್, ಎನ್‌ಎಸ್‌ಎಸ್ ಯೋಜನಾಧಿಕಾರಿ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಪವಿತ್ರ ಕಾರ‍್ಯಕ್ರಮ ನಿರೂಪಿಸಿ ಯಶ್ವಿತಾ ವಂದಿಸಿದರು.

Kinnigoli-02071501

Comments

comments

Comments are closed.

Read previous post:
Kinnigoli-01071504
ಸನ್ಮಾನ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೊಲ್ಲೂರು ಗ್ರಾಮದ ಸದಸ್ಯರಾಗಿ ಆಯ್ಕೆಯಾದ ಆನಂದ ಕೆ. ಅವರನ್ನು ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಕೊಲ್ಲೂರು ಕವತ್ತಾರು ಒಕ್ಕೂಟ ಹಾಗೂ ದುರ್ಗಾಂಬಿಕ...

Close