ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆ

ಕಿನ್ನಿಗೋಳಿ: ಪಂಚಾಯತ್‌ರಾಜ್ ವ್ಯವಸ್ಥೆಯ ತಳಮಟ್ಟದ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ಚುನಾವಣೆಗಳು ನಡೆಯುತ್ತಿದ್ದು ಕಿನ್ನಿಗೋಳಿಯಲ್ಲಿ
ಸ್ಥಳೀಯ ರಾಜಕಾರಣದ ಚಟುವಟಿಕೆಗಳು ಚುರುಕುಗೊಂಡು ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತೆ ಫಿಲೋಮಿನಾ ಸಿಕ್ವೇರಾ ಹಾಗೂ ಕಾಂಗ್ರೇಸಿನ ಬಂಡಾಯ ಅಭ್ಯರ್ಥಿ ಮಾಜಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ನಾಮಪತ್ರ ಸಲ್ಲಿಸಿದ್ದರು. ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತೆ ಸುಜಾತ ಪೂಜಾರ್ತಿ ಮತ್ತು ಬಿಜೆಪಿ ಬೆಂಬಲಿತೆ ಹೇಮಲತಾ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ನಾಟಕೀಯ ತಿರುವು ಪಡೆದುಕೊಂಡು ಕಾಂಗ್ರೇಸ್ ಆಡಳಿತ ಚುಕ್ಕಾಣಿ ಕಳೆದು ಕೊಳ್ಳುವ ಭೀತಿ ಎದುರಾಗಿ ಕೊನೆಗೂ ಕಾಂಗ್ರೇಸ್ ಬೆಂಬಲಿತರಾದ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷೆಯಾಗಿ ಮತ್ತು ಸುಜಾತ ಪೂಜಾರ್ತಿ ಉಪಾಧ್ಯಕ್ಷೆಯಾಗಿ ಶನಿವಾರ ಆಯ್ಕೆಯಾಗಿ ಪ್ರಕರಣ ಸುಖಾಂತ್ಯಗೊಂಡಿತು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿದ್ದು ಪಂಚಾಯಿತಿಯ ಒಟ್ಟು 21 ಮಂದಿ ಸದಸ್ಯರ ಪೈಕಿ ಕಾಂಗ್ರೇಸ್ ಬೆಂಬಲಿತರು 14 ಮಂದಿ ಇದ್ದು ಬಿಜೆಪಿ ಬೆಂಬಲಿತರು 7 ಮಂದಿ ಆಯ್ಕೆಯಾಗಿದ್ದರು. ಅಧ್ಯಕ್ಷೆ ಗಾದಿಗಾಗಿ ಕಾಂಗ್ರೇಸ್ ಸದಸ್ಯರೊಳಗೆ ಬಿನ್ನಾಬಿಪ್ರಾಯ, ಪೈಪೋಟಿ ನಡೆದಿದ್ದು ರಾಜಕೀಯ ಪಕ್ಷಗಳು ಸಹ ತೆರೆಮರೆಯಲ್ಲಿ ತಮ್ಮ ಸದಸ್ಯ ಬಲವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಿದ್ದರೂ ಸಹ ಮಹಿಳೆಯರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಗೌಪ್ಯವಾಗಿತ್ತು. ಕಾಂಗ್ರೇಸ್‌ನ ಪ್ರಬಲ ಆಕಾಂಕ್ಷಿ ಪಿಲೋಮಿನಾ ಸಿಕ್ವೇರಾ ಹಾಗೂ ಮಾಜಿ ಅದ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಅವರಲ್ಲಿ ಬಿರುಸಿನ ಪೈಪೋಟಿ ನಡೆಯಿತು.
ರೆಸಾರ್ಟ್ ರೀತಿಯ ರಾಜಕಾರಣ ಕಿನ್ನಿಗೋಳಿಯಂತಹ ಗ್ರಾಮೀಣ ಪರಿಸರದಲ್ಲಿ ಕಂಡು ಬಂದಿದ್ದು ಸಾರ್ವಜನಿಕರು ಬಾಯಲ್ಲಿ ಆಡಿಕೊಳ್ಳುವಂತಹದಾಗಿದ್ದು ಮಾತ್ರ ವಿಷಾದನೀಯವಾಗಿತ್ತು.
ಆದರೆ ಚುನಾವಣೆ ನಡೆದಾಗ 14 ಬಲವುಳ್ಳ ಕಾಂಗ್ರೇಸ್ 12 ಮತ ಪಡೆದು ಪಿಲೋಮಿನಾ ಸಿಕ್ವೇರಾ ವಿಜಯಿಯಾದರೆ. ಶ್ಯಾಮಲಾ ಪಿ. ಹೆಗ್ಡೆ ಅವರು ಬಿಜೆಪಿ ಸದಸ್ಯರ ಬೆಂಬಲ ಪಡೆದುಕೊಂಡು 9 ಮತ ಗಳಿಸಿದರು. ಉಪಾಧ್ಯಕ್ಷ ಸ್ಥಾನವು ಇದೇ ಅಂತರ ಪಡೆದುಕೊಂಡಿದೆ. ಸಚಿವ ಕೆ. ಅಭಯಚಂದ್ರ ಜೈನ್ ಕಿನ್ನಿಗೋಳಿಯಲ್ಲಿ ಬೆಳಿಗ್ಗಿನಿಂದಲೇ ಮೊಕ್ಕಾಂ ಹೂಡಿ ಚುನಾವಣೆಯಲ್ಲಿ ವಿಜಯ ಗಳಿಸಿದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗೆ ಶುಭಾಷಯ ಸಲ್ಲಿಸಿದರು.

ಚುನಾವಣಾಧಿಕಾರಿ ಶೇಷಕೃಷ್ಣ ಅಧ್ಯಕ್ಷೆ ಉಪಾಧ್ಯಕ್ಷೆಯರ ಆಯ್ಕೆ ಘೋಷಿಸಿದರು.

Kinnigoli-04071508 Kinnigoli-04071509 Kinnigoli-04071510

Comments

comments

Comments are closed.

Read previous post:
Mulki-04071507
ಹೊಸ ಪಠ್ಯ ವಿಷಯದ ಬಗ್ಗೆ ಉಪನ್ಯಾಸ

ಮುಲ್ಕಿ: ಶಿಕ್ಷಣ ಕ್ಷೇತ್ರದಲ್ಲಿ ಸತತ ಸಂಶೋಧನಾತ್ಮಕ ಅಧ್ಯಯನಗಳು ನಡೆಯುತ್ತಿದ್ದರೆ ಮಾತ್ರ ವಿಧ್ಯಾಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ಹೇಳಿದರು. ಮುಲ್ಕಿ ವಿಜಯಾ...

Close