ಮುಲ್ಕಿ: ಪ್ರತಿಭಾ ಪುರಸ್ಕಾರ

ಮುಲ್ಕಿ: ಇತ್ತೀಚಿನ ದಿನಗಳಲ್ಲಿ ಜನರು ಫಾಸ್ಟ್ ಫುಡ್ ಗೆ ಮುಗಿ ಬೀಳುತ್ತಿದ್ದು ಇದರಿಂದು ಆರೋಗ್ಯ ಸಮಸ್ಯೆ ಕಂಡು ಬರುತ್ತಿದ್ದು ಉತ್ತಮ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವೆಂದು ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಸ್ಮಾರಕ ವೈದ್ಯಕೀಯ ಸಂಸ್ಥೆಯ ಡಾ ಸಂಜಯ್ ಕಿಣಿ ಹೇಳಿದರು.
ಮುಲ್ಕಿ ಕೋಟೆಕೇರಿ ಶ್ರೀ ನವದುರ್ಗಾ ಯುವಕ ವೃಂದದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಕನ್ನಡಕ ವಿತರಣಾ ಸಮಾರಂಭದಲ್ಲಿ ಆಹಾರ ಸುರಕ್ಷತೆ ಬಗ್ಗೆ ಉಪನ್ಯಾಸಗೈದು ಮಾತನಾಡಿದರು.
ಮುಲ್ಕಿ ಉದ್ಯಮಿ ಅತುಲ್ ಕುಡ್ವಾ ಅಧ್ಯಕ್ಷತೆ ವಹಿಸಿದರು. ಮುಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಲ್ಕಿ ವ್ಯಾಫ್ತಿಯ ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹಾಗೂ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಜರಗಿದ ಕಣ್ಣು ಪರೀಕ್ಷಾ ಶಿಬಿರದಲ್ಲಿ ಪಾಲ್ಗೊಂಡ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಎ ಪಿ ಎಂ ಸಿ ಸದಸ್ಯ ಪ್ರಮೋದ್ ಕುಮಾರ್, ಮುಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಮತ್ತು ಸತೀಶ್ ಅಂಚನ್ ಬಾಳೆಹಿತ್ಲು, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Prakash Suvarna

Mulki-04071504

Comments

comments

Comments are closed.

Read previous post:
Mulki-04071502
ಹಾವನ್ನು ಹೋಲುವ ಅಣಬೆ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಹಿಂಬದಿಯಲ್ಲಿ ಆವರಣ ಗೋಡೆಗೆ ತಾಗಿರುವ ಸೀತಾಫಲ ಮರದಲ್ಲಿನ ತೂತಿನಲ್ಲಿ ನಾಗರ ಹಾವನ್ನು ಹೋಲುವ ಅಣಬೆಯೊಂದು ಕಂಡು ಬಂದಿದ್ದು ದೂರದಲ್ಲಿ...

Close