ಮುಲ್ಕಿ: ವಿದ್ಯಾರ್ಥಿ ವೇತನ

ಮುಲ್ಕಿ: ಮುಲ್ಕಿ ರಾಮಕೃಷ್ಣ ಪೂಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಲ್ಕಿ ಕಾರ್ನಾಡು ಎಂ ಆರ್ ಎಚ್ ಪೂಂಜ ಇವರ ಮನೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಲ್ಕಿ ಪರಿಸರದ ಸುಮಾರು 300 ವಿದ್ಯಾರ್ಥಿಗಳಿಗೆ 6 ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿ ವೇತನವನ್ನು ಕಾಪು ಬಂಟರ ಸಂಘದ ಅಧ್ಯಕ್ಷ ಬಿ ಸಚ್ಚಿದಾನಂದ ಶೆಟ್ಟಿ ವಿತರಿಸಿದರು.
ಟ್ರಸ್ಟ್ ಸದಸ್ಯೆ ಪದ್ಮಾವತಿ ಎಚ್ ಪೂಂಜ ಅಧ್ಯಕ್ಷತೆ ವಹಿಸಿದರು ಮುಲ್ಕಿ ಚರ್ಚ್ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಮುಲ್ಕಿ ವಿಜಯ ಕಾಲೇಜು ಪ್ರಾಚಾರ್ಯ ಕೆ ಆರ್ ಶಂಕರ್, ಮುಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಕೆಂಚನಕೆರೆ ಯೋಗೊಪಾಸನ ಕೇಂದ್ರದ ಜಯ ಮುದ್ದು ಶೆಟ್ಟಿ, ಹಿರಿಯ ಸಾಹಿತಿ ಎನ್ ಪಿ ಶೆಟ್ಟಿ, ಟ್ರಸ್ಟ್ ಸದಸ್ಯರಾದ ಸಚ್ಚಿದಾನಂದ ಹೆಗ್ಡೆ, ಆದಿತ್ಯ ಪೂಂಜ, ಎಂ ಎಚ್ ಅರವಿಂದ ಪೂಂಜ, ಸ್ಯಾಮ್ ಮಾಬೆನ್, ವೈ ಎನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-04071505

Comments

comments

Comments are closed.

Read previous post:
Mulki-04071504
ಮುಲ್ಕಿ: ಪ್ರತಿಭಾ ಪುರಸ್ಕಾರ

ಮುಲ್ಕಿ: ಇತ್ತೀಚಿನ ದಿನಗಳಲ್ಲಿ ಜನರು ಫಾಸ್ಟ್ ಫುಡ್ ಗೆ ಮುಗಿ ಬೀಳುತ್ತಿದ್ದು ಇದರಿಂದು ಆರೋಗ್ಯ ಸಮಸ್ಯೆ ಕಂಡು ಬರುತ್ತಿದ್ದು ಉತ್ತಮ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಂಡು ಬರಲು...

Close