ಮೂಲ್ಕಿ: ರೋಟರಿ ಕ್ಲಬ್ ಪದಗ್ರಹಣ

ಮೂಲ್ಕಿ: ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಮೂಲಕ ದೇಶದ ಅಭಿವೃದ್ಧಿಯ ಪಾಲುದಾರರಾಗಬೇಕು ಎಂದು ರೋಟರಿ ಡಿಸ್ಟ್ರಿಕ್ಟ್ 3180 ಎಟೆಂಡೆನ್ಸ್ ಮತ್ತು ಥೇಮ್ ಪ್ರಮೋಷನ್ ಚೇರ್‌ಮ್ಯಾನ್ ಬಿ.ಶೇಕರ ಶೆಟ್ಟಿ ಹೇಳಿದರು.
ಮೂಲ್ಕಿ ರೋಟರಿ ಕ್ಲಬ್ ವತಿಯಿಂದ ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಪದಗ್ರಹಣಾಧಿಕಾರಿಯಾಗಿ ಮಾತನಾಡಿದರು.
ಸೇವಾಕಾರ್ಯಗಳು ತಮ್ಮ ಮನೆಯಿಂದ ಪ್ರಾರಂಭಗೊಳ್ಳಬೇಕು ಕೌಟುಂಬಿಕ ಅಭಿವೃದ್ಧಿಯೊಂದಿಗೆ ಸಾಮಾಜಿಕ ಕಳಕಳಿಯನ್ನು ರೋಟರಿ ಸದಸ್ಯರು ಹೊಂದಿರುವ ಕಾರಣ ವಿದ್ಯೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ರೋಟರಿ ಅತ್ಯುನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಈ ಸಂದರ್ಭ 2015-16 ಸಾಲಿನ ಅಧ್ಯಕ್ಷರಾಗಿ ರವಿಚಂದ್ರ ಹಾಗೂ ಇತರ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.
ಸೇವಾ ಕಾರ್ಯಕ್ರಮದ ಪರವಾಗಿ ಬಿರುಗಾಳಿಯಲ್ಲಿ ಮನೆಯನ್ನು ಕಳೆದುಕೊಂಡ ಕೆರೆಕಾಡು ನಿವಾಸಿ ವಿಜಯಲಕ್ಷ್ಮಿ ಅವರಿಗೆ ಧನ ಸಹಾಯ ಮತ್ತು ಮುಲ್ಕಿ ಮೆಡಲಿನ್ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ನೀಡುವ ಕಾರ್ಯಕ್ರಮ ಜರುಗಿತು.
ಸಹಾಯಕ ರಾಜ್ಯಪಾಲ ಸತ್ಯೇಂದ್ರ ಪೈ ಮುಲ್ಕಿ ರೋಟರಿ ಗೃಹ ಪತ್ರಿಕೆ ಮೂಲಿಕಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮುಲ್ಕಿ ಹೋಬಳಿಯ ಎಸ್‌ಎಸ್ ಎಲ್‌ಸಿ ಮತ್ತು ಪಿಯುಸಿ ವಿಭಾಗದ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ, ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್, 2015-16 ಸಾಲಿನ ಅಧ್ಯಕ್ಷ ರವಿಚಂದ್ರ ಮತ್ತು ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ, ವಿನುತಾ ರವಿಚಂದ್ರ, ರತ್ನಾವತಿ ಆಚಾರ್ಯ, ವೈ.ಎನ್.ಸಾಲ್ಯಾನ್, ರಾಜಾ ಪತ್ರಾವೊ, ಅಶೋಕ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Mulki-04071506

Comments

comments

Comments are closed.

Read previous post:
Mulki-04071505
ಮುಲ್ಕಿ: ವಿದ್ಯಾರ್ಥಿ ವೇತನ

ಮುಲ್ಕಿ: ಮುಲ್ಕಿ ರಾಮಕೃಷ್ಣ ಪೂಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಲ್ಕಿ ಕಾರ್ನಾಡು ಎಂ ಆರ್ ಎಚ್ ಪೂಂಜ ಇವರ ಮನೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಲ್ಕಿ ಪರಿಸರದ ಸುಮಾರು...

Close