ಹೊಸ ಪಠ್ಯ ವಿಷಯದ ಬಗ್ಗೆ ಉಪನ್ಯಾಸ

ಮುಲ್ಕಿ: ಶಿಕ್ಷಣ ಕ್ಷೇತ್ರದಲ್ಲಿ ಸತತ ಸಂಶೋಧನಾತ್ಮಕ ಅಧ್ಯಯನಗಳು ನಡೆಯುತ್ತಿದ್ದರೆ ಮಾತ್ರ ವಿಧ್ಯಾಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ವಿಜಯಾ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ಹೇಳಿದರು.
ಮುಲ್ಕಿ ವಿಜಯಾ ಕಾಲೇಜಿನಲ್ಲಿ ಶನಿವಾರ ನಡೆದ ಮಂಗಳೂರು ಸಮಾಜ ಶಾಸ್ತ್ರ ಸಂಘ ಮತ್ತು ಕಾಲೇಜು ಸಮಾಜ ಶಾಸ್ತ್ರ ವಿಭಾಗದ ಸಂಯೋಜನೆಯಲ್ಲಿ ತೃತೀಯ ಬಿ.ಎ(ಕಲಾ ವಿಭಾಗ) ಹೊಸ ಪಠ್ಯ ವಿಷಯದ ಬಗ್ಗೆ ಉಪನ್ಯಾಸಕರಿಗಾಗಿ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಸಮಾಜ ಶಾಸ್ತ್ರ ಸಂಘದ ಅಧ್ಯಕ್ಷ ಡಾ. ವಿನಯ್‌ರಜತ್ ಪ್ರಸ್ಥಾವಿಸಿದರು. ಕಾಲೇಜ ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ.ಶ್ರೀಮಣಿ ಶೆಟ್ಟಿ ಸ್ವಾಗತಿಸಿದರು. ಲಕ್ಷ್ಮೀದೇವಿ ಕಾರ್ಯಕ್ರಮ ನಿರೂಪಿಸಿದರು. ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಚೆನ್ನ ಪೂಜಾರಿ ವಂದಿಸಿದರು. ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಉಪನ್ಯಾಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Bhagyavan Sanil

Mulki-04071507

Comments

comments

Comments are closed.

Read previous post:
Mulki-04071506
ಮೂಲ್ಕಿ: ರೋಟರಿ ಕ್ಲಬ್ ಪದಗ್ರಹಣ

ಮೂಲ್ಕಿ: ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಮೂಲಕ ದೇಶದ ಅಭಿವೃದ್ಧಿಯ ಪಾಲುದಾರರಾಗಬೇಕು ಎಂದು ರೋಟರಿ ಡಿಸ್ಟ್ರಿಕ್ಟ್ 3180...

Close