ಐಕಳ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ

ಕಿನ್ನಿಗೋಳಿ: 14 ಸಂಖ್ಯಾ ಬಲವಿರುವ ಐಕಳ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 8, ಕಾಂಗ್ರೇಸ್ ಬೆಂಬಲಿತ 6 ಸದಸ್ಯರು ಗೆದ್ದಿದ್ದರು. ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ದಿವಾಕರ ಚೌಟ ಹಾಗೂ ಕಾಂಗ್ರೇಸ್ ಬೆಂಬಲಿತರಾಗಿ ಯೋಗೀಶ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದು, ದಿವಾಕರ ಚೌಟ 9 ಮತಗಳನ್ನು ಪಡೆದು ವಿಜಯಿಯಾದರು. ಯೋಗೀಶ್ ಕೋಟ್ಯಾನ್ 4 ಮತಗಳನ್ನು ಪಡೆದು ಪರಾಜಿತರಾದರು.
ಶೇಷಕೃಷ್ಣ ಚುನಾವಣೆಯಾಧಿಕಾರಿಯಾಗಿದ್ದರು.
ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಗೆ ಮೀಸಲಾಗಿದ್ದು ಬಹುಮತ ಪಡೆದಿರುವ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಸ್ಥಾನದ ಸದಸ್ಯೆ ಇಲ್ಲದಿರುವುದರಿಂದ ಕಾಂಗ್ರೇಸ್ ಬೆಂಬಲಿತೆ ಸುಂದರಿ ಆರ್. ಸಾಲ್ಯಾನ್ ಅವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ದೇವಪ್ರಸಾದ್ ಪುನರೂರು, ರಘುರಾಮ್ ಶೆಟ್ಟಿ ವಿಜೇತರನ್ನು ಅಭಿನಂದಿಸಿದರು.

Kinnigoli-06071505

Comments

comments

Comments are closed.

Read previous post:
Mulki-06071504
ಪರಿಸರ ನೈರ್ಮಲ್ಯ ಕಾರ್ಯಕ್ರಮ

ಮೂಲ್ಕಿ: ಪರಿಸರ ಶುದ್ದವಾಗಿರಿಸುವ ಮೂಲಕ ಆರೋಗ್ಯ ಗಳಿಕೆ ಸಾಧ್ಯವಿದ್ದು ನಮ್ಮ ಸೇವೆಯನ್ನು ಮನೆಯಿಂದ ಪ್ರಾರಂಭಿಸಿ ಮುಂದುವರಿಸುತ್ತಾ ಸಮಾಜಕ್ಕೆ ಅರ್ಪಿಸಬೇಕು ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮ...

Close