ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ

ಮೂಲ್ಕಿ: ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತವಾದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದ್ದು ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಆಸ್ಪತ್ರೆ ಸಮಿತಿಯ ಸಭೆಯನ್ನು ಕರೆದು ಬಗೆಹರಿಸಲಾಗುವುದೆಂದು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರವು ವಿಶಾಲವಾದ ಜಾಗವನ್ಜು ಹೊಂದಿದ್ದು ಇಲ್ಲಿಯ ಅಭಿವೃದ್ದಿ ಬಗ್ಗೆ ಮುಂದಿನ ದಿನಗಳಲ್ಲಿ ರೂಪು ರೇಖೆ ಸಿದ್ಧಪಡಿಸಲಾಗುವುದು, ಸಾರ್ವಜನಿಕರಿಗೆ ಆಸ್ಪತ್ರೆಯು ಸದುಪಯೋಗವಾಗಬೇಕೆಂದು ಅವರು ಹೇಳಿದರು.
ಉದ್ಯಮಿಗಳಾದ ಎಂ ಎಚ್ ಅರವಿಂದ ಪೂಂಜ, ಸೈಯದ್ ಕರ್ನಿರೆ, ಸದಾಶಿವ ಸಾಲ್ಯಾನ್ ಪೈಯೊಟ್ಟು, ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ ಎಂ ಅಸೀಫ್, ಸದಸ್ಯ ಹರ್ಷರಾಜ್ ಶೆಟ್ಟಿ ಜಿ ಎಮ್ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-06071503

Comments

comments

Comments are closed.

Read previous post:
Mulki-06071502
ನೂತನ ನಾಡ ಕಛೇರಿ ಶಿಲಾನ್ಯಾಸ

ಮೂಲ್ಕಿ: ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದಾಗ ಜನರಲ್ಲಿ ಉತ್ತಮ ಭಾವನೆ ಮೂಡಲು ಸಾಧ್ಯವಿದ್ದು ಮೂಲ್ಕಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ನಾಡ ಕಚೇರಿ ಕಟ್ಟಡವು ರಾಜ್ಯದಲ್ಲಿ ಹೆಚ್ಚು...

Close