ಪರಿಸರ ನೈರ್ಮಲ್ಯ ಕಾರ್ಯಕ್ರಮ

ಮೂಲ್ಕಿ: ಪರಿಸರ ಶುದ್ದವಾಗಿರಿಸುವ ಮೂಲಕ ಆರೋಗ್ಯ ಗಳಿಕೆ ಸಾಧ್ಯವಿದ್ದು ನಮ್ಮ ಸೇವೆಯನ್ನು ಮನೆಯಿಂದ ಪ್ರಾರಂಭಿಸಿ ಮುಂದುವರಿಸುತ್ತಾ ಸಮಾಜಕ್ಕೆ ಅರ್ಪಿಸಬೇಕು ಎಂದು ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ಧರ್ಮ ಗುರುಗಳಾದ ಫಾ. ಪ್ರಾನ್ಸೀಸ್ ಝೇವಿಯರ್ ಗೋಮ್ಸ್ ಹೇಳಿದರು.
ಅತಿಕಾರಿ ಬೆಟ್ಟು ಗ್ರಾಮದ ಮೊಲೊಟ್ಟು ಪೇಟೆಯ ಬಳಿ ಕೊಸೆಸಾಂ ವಾರ್ಡು ಸದಸ್ಯರು, ಹಳೆವಿದ್ಯಾರ್ಥಿ ಸಂಘ. ಸ್ವಾಭಿಮಾನ್ ಸ್ವ ಸಹಾಯ ಸಂಘ ಮತ್ತು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತಿಯ ಸಹಯೋಗದಲ್ಲಿ ಭಾನುವಾರ ಪರಿಸರ ನೈರ್ಮಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಅಭಿವೃದ್ಧಿಗಾಗಿ ಮಮ್ಮ ಪ್ರಧಾನಿಯವರು ಘೋಷಿಸಿದ ಯೋಜನೆಗಳಾದ ಪರಿಸರ ಸ್ವಚ್ಚತೆ ಹಾಗೂ ಯೋಗ ಸಾಧನೆ ಮುಂತಾದ ಅತ್ಯುತ್ತಮ ವಿಚಾರಗಳನ್ನು ಮನದಲ್ಲಿರಿಸಿ ಯಾವುದೇ ಜಾತಿ ಮತ ಭೇಧವಿಲ್ಲದೆ ಮಾನವ ಕುಲ ರಕ್ಷಣೆಯ ಧ್ಯೇಯ ನಮ್ಮದಾಗಬೇಕು ಎಂದರು.
ಈ ಸಂದರ್ಭ ಮೊಲೊಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಅತಿಕಾರಿ ಬೆಟ್ಟು ಗ್ರಾಮ ಸದಸ್ಯರಾದ ಶಾರದಾ ವಸಂತ್, ಮನೋಹರ ಕೋಟ್ಯಾನ್, ಸುಮತಿ, ಶಾರದಾ, ದಯಾನಂದ ಕೋಟ್ಯಾನ್, ಚರ್ಚು ಪಾಲನಾ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ, ಕೊಸೆಸಾಂ ವಾರ್ಡು ಗುರಿಕಾರ ಲೋರೆನ್ಸ್ ರೋಡ್ರಿಗಸ್ ಉಪಸ್ಥಿತರಿದ್ದರು. ವಲೇರಿಯನ್ ರೋಡ್ರಿಗಸ್ ನಿರೂಪಿಸಿದರು.

Bhagyawan Sanil

Mulki-06071504

Comments

comments

Comments are closed.

Read previous post:
Mulki-06071503
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ

ಮೂಲ್ಕಿ: ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತವಾದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದ್ದು ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಆಸ್ಪತ್ರೆ ಸಮಿತಿಯ...

Close