ನೂತನ ನಾಡ ಕಛೇರಿ ಶಿಲಾನ್ಯಾಸ

ಮೂಲ್ಕಿ: ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದಾಗ ಜನರಲ್ಲಿ ಉತ್ತಮ ಭಾವನೆ ಮೂಡಲು ಸಾಧ್ಯವಿದ್ದು ಮೂಲ್ಕಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ನಾಡ ಕಚೇರಿ ಕಟ್ಟಡವು ರಾಜ್ಯದಲ್ಲಿ ಹೆಚ್ಚು ಸವಲತ್ತುಗಳನ್ನೊಳಗೊಂಡ ಉತ್ತಮ ಕಛೇರಿಯಾಗಿ ಮೂಡಿ ಬರಲಿದೆ ಇದಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ಕಾರ್ನಾಡಿನ ಗಾಂಧಿ ಮೈದಾನದ ಸಮೀಪವಿರುವ ಹಳೆ ನಾಡ ಕಛೇರಿಯಲ್ಲಿ ನೂತನವಾಗಿ 24 ಲಕ್ಷ ವೆಚ್ಚದಲ್ಲಿ ನಿಮಾರ್ಣವಾಗಲಿರುವ ಒಂದು ಮಹಡಿಯ ಸುಸಜ್ಜಿತವಾದ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಮೂಲ್ಕಿಯಲ್ಲಿ ನಗರ ಪಂಚಾಯಿತಿ ಜಾಗ ಗುರುತಿಸಿದಲ್ಲಿ 50 ಲಕ್ಷ ವೆಚ್ಚದಲ್ಲಿ ಸ್ಕೇಟಿಂಗ್ ಹಾಗೂ ಸುಸಜ್ಜಿವಾದ ಮೀನು ಮಾರುಕಟ್ಟೆ ನಿರ್ಮಿಸಲಾಗುವುದು. ಸಸಿಹಿತ್ಲುವಿನಲ್ಲಿ 10 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣವಾಗಲಿದ್ದು, ಕುಳಾಯಿಯಲ್ಲಿ 200 ಕೋಟಿ ವೆಚ್ಚದ ಮೀನುಗಾರಿಕಾ ಬಂದರು ನಿಮಾರ್ಣವಾಗಲಿದ್ದು ಜನರ ಸಹಕಾರವಿದ್ದಲ್ಲಿ ಇನ್ನು ಹೆಚ್ಚಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದೆಂದು ಹೇಳಿದರು.
ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ ವಹಿಸಿದ್ದು, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಸಹಾಯಕ ಆಯುಕ್ತ ಅಶೋಕ್ ಡಿ ಆರ್, ಮೂಲ್ಕಿ ಕಾರ್ನಾಡಿನ ಮಾತಾ ಅಮಲೋದ್ಭವ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಮೂಲ್ಕಿ ಕಾರ್ನಾಡಿನ ನೂರು ಮಸೀದಿಯ ಖತೀಬರಾದ ಅಬ್ದುಲ್ ದಾರಿಮಿ, ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ಸುವರ್ಣ, ಉದ್ಯಮಿಗಳಾರ ಎಂ ಎಚ್ ಅರವಿಂದ ಪೂಂಜ.ಸೈಯದ್ ಕರ್ನಿರೆ, ಮೂಲ್ಕಿ ನಗರ ಪಂಚಾಯತ್ ಸದಸ್ಯೆ ಪುತ್ತು ಬಾವು, ಸದಾಶಿವ ಸಾಲ್ಯಾನ್ ಪೈಯೊಟ್ಟು, ಕಸಾಪ ದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಗುತ್ತಿಗೆದಾರ ಅಕ್ಷಯ್ ಪುತ್ತೂರು, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಮತ್ತಿತರರು ಉಪಸ್ಥಿತರಿದ್ದರು.
ಸಹಾಯಕ ಆಯುಕ್ತ ಅಶೋಕ್ ಡಿ ಆರ್ ಸ್ವಾಗತಿಸಿದರು, ವಿಶೇಷ ತಹಶೀಲ್ದಾರ್ ಎ ಜಿ ಖೇಣಿ ಪ್ರಸ್ತಾವನೆಗೈದರು, ಉಪ ತಹಶೀಲ್ದಾರ್ ಸೀತಾರಾಮ ವಂದಿಸಿದರು, ಶರತ್ ಶೆಟ್ಟಿ ನಿರೂಪಿಸಿದರು.

Prakash Suvarna

Mulki-06071502

Comments

comments

Comments are closed.

Read previous post:
Mulki-06071501
ಜಂತುಹುಳ ನಿವಾರಣಾ ಕಾರ‍್ಯಕ್ರಮ

ಮೂಲ್ಕಿ: ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ದ.ಕ. ಹಾಲು ಒಕ್ಕೂಟದ ಸಹಭಾಗಿತ್ವದಲ್ಲಿ ಸಾಮೂಹಿಕ ಜಂತುಹುಳ ನಿವಾರಣಾ ಕಾರ‍್ಯಕ್ರಮ ನಡೆಯಿತು. ಸುಮಾರು 500 ಹಸುಗಳಿಗೆ ಔಷಧಿಯನ್ನು...

Close