ಕೊ.ಅ.ಉಡುಪ ಪ್ರಶಸ್ತಿ

Kinnigoli-07071501

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ವೈದ್ಯ ಡಾ|| ನಾ.ಮೊಗಸಾಲೆ ಇವರಿಗೆ ನೀಡಲಾಗುವುದು. 1966ರಲ್ಲಿ ಕಾಂತಾವರ ರೈತ ಯುವಕ ಸಂಘದ ಸ್ಥಾಪನೆ, 1976ರಲ್ಲಿ ಕಾಂತಾವಾರ ಕನ್ನಡ ಸಂಘದ ಸ್ಥಾಪನೆ ಮಾಡಿ ಸಾಹಿತ್ಯಿಕ ಮಟ್ಟದಲ್ಲಿ ಗುರುತಿಸಿಕೊಂಡವರು. 1978ರಲ್ಲಿ ಮೂಡುಬಿದ್ರೆ ವರ್ಧಮಾನ ಪ್ರಶಸ್ತಿ ಪೀಠದ ಸ್ಥಾಪನೆ, 2003ರಲ್ಲಿ ಕನ್ನಡ ಭವನ ನಿರ್ಮಾಣ, 2008ರಲ್ಲಿ ಅಲ್ಲಮ ಪ್ರಭು ಪೀಠದ ಸ್ಥಾಪನೆ ಮಾಡಿ ಜನಮೆಚ್ಚುಗೆ ಗಳಿಸಿದವರು. ಕವನ, ಕಾದಂಬರಿ, ಕಥೆ, ಲೇಖನ, ವೈದ್ಯಕೀಯ ಸಹಿತ ಇವರ ಸುಮಾರು 60ಕ್ಕೂ ಮಿಕ್ಕಿ ಕೃತಿಗಳು ಪ್ರಕಟಗೊಂಡಿದೆ.
ಇವರ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಲಭಿಸಿವೆ.
ಕೊ.ಅ.ಉಡುಪ ಪ್ರಶಸ್ತಿಯನ್ನು ಇದೇ ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗಣ್ಯರ
ಉಪಸ್ಥಿತಿಯಲ್ಲಿ ಜರಗಲಿರುವ ಕೊ.ಅ.ಉಡುಪ ಸಂಸ್ಮರಣ ಸಮಾರಂಭದಲ್ಲಿ ರೂ. 10,000/- ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-06071506
ಬಳ್ಕುಂಜೆ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಅವಿರೋಧ ಆಯ್ಕೆ

ಕಿನ್ನಿಗೋಳಿ: 12 ಸ್ಥಾನಗಳುಳ್ಳ ಬಳ್ಕುಂಜೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 10, ಕಾಂಗ್ರೇಸ್ 1, ಪಕ್ಷೇತರ 1 ಸ್ಥಾನ ಗಳಿಸಿದ್ದು ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು...

Close