ಅತಿಕಾರಿ ಬೆಟ್ಟು – ಶಾರದಾ ವಸಂತ್ ಆಯ್ಕೆ

ಮೂಲ್ಕಿ: ನೂತನವಾಗಿ ನಿರ್ಮಾಣಗೊಂಡ ಅತಿಕಾರಿ ಬೆಟ್ಟು ಪಂಚಾಯತಿಯ ಚೊಚ್ಚಲ ಅಧ್ಯಕ್ಷರಾಗಿ ಶಾರದಾ ವಸಂತ್ ಮತ್ತು ಉಪಾಧ್ಯಕ್ಷರಾಗಿ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
10 ಸದಸ್ಯ ಬಲದ ಅತಿಕಾರಿಬೆಟ್ಟು ಪಂಚಾಯತಿಯ ಚುಣಾಮಣೆಯಲ್ಲಿ ಕಾಂಗ್ರೆಸ್ 6 ಸ್ಥಾನಗನ್ನು ಮತ್ತು ಬಿಜೆಪಿ 4 ಸ್ಥಾನಗಳನ್ನು ಗಳಿಸಿತ್ತು.
ಅಧ್ಯಕ್ಷೇಯ ಚುಣಾವಣೆಗಾಗಿ ಕಾಂಗ್ರೆಸ್ ಬೆಂಬಲಿತ ಶಾರದಾ ವಸಂತ್ ಮತ್ತು ಬಿಜೆಪಿ ಬೆಂಬಲಿತ ಕಲಾವತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ಜೀವನ್ ಶೆಟ್ಟಿ ನಾಮಪತ್ರ ಸಲ್ಲಿಸಿದರು. ಚುಣಾವಣೆಯಲ್ಲಿ ಶಾರದಾ ವಸಂತ್ ಮತ್ತು ಕಿಶೋರ್ ಶೆಟ್ಟಿ 6-4 ಮತದ ಅಂತರದಲ್ಲಿ ಜಯಶಾಲಿಯಾದರು. ಮಂಗಳೂರು ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ಸೂರ್ಯನಾರಾಯಣ ಚುಣಾವಣೆ ಪ್ರಕ್ರಿಯೆ ನಡೆಸಿದರು.ಅತಿಕಾರಿ ಬೆಟ್ಟು ಪಿಡಿಒ ಯೋಗೀಶ್ ನಾನಿಲ್ ಉಪಸ್ಥಿತರಿದ್ದರು.

ಈ ಸಂದರ್ಭ ಕಿಲ್ಪಾಡಿ ಪಂ.ಸದಸ್ಯ ಗೋಪೀನಾಥ ಪಡಂಗ, ಶರೀಪ್ ಕಿಲ್ಪಾಡಿ,ಧನಂಜಯ ಮಟ್ಟು, ಮತ್ತಿತರರು ಹಾಗೂ ಸಾರ್ವಜನಿಕರು ವಿಜೇತರನ್ನು ಅಭಿನಂದಿಸಿದರು.

ಅತಿಕಾರಿ ಗ್ರಾಮವು ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಾದರಿ ಗ್ರಾಮವಾಗಿ ರೂಪಿಸಲು ಪ್ರಯತ್ನಿಸುತ್ತೇವೆ ಎಂದು ಅಧ್ಯಕ್ಷ ಶಾರದಾ ವಸಂತ್ ತಿಳಿಸಿದರು.

Bhagyavan Sanil

Mulki-08071504

Comments

comments

Comments are closed.

Read previous post:
Mulki-08071503
ಲಯನ್ಸ್ 2015-16 ನೇ ಸಾಲಿನ ಅಧ್ಯಕ್ಷ ಉದಯ ಅಮೀನ್

ಮೂಲ್ಕಿ: ಶಿಕ್ಷಣ,ಆರೋಗ್ಯ, ಸಮಾಜಿಕ ಸಹಕಾರ ಕ್ಷೇತ್ರಗಳಲ್ಲಿಲಯನ್ಸ್ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಜನಸಾಮಾನ್ಯರನ್ನು ಉನ್ನತೀಕರಣ ಗೊಳಿಸಲು ಲಯನ್ಸ್ ಇಂಟರ್‌ನ್ಯಾಷನಲ್ ಯೋಜನೆ ರೂಪಿಸಿದೆ ಎಂದು...

Close