ಹಳೆಯಂಗಡಿ ಗ್ರಾ.ಪಂ.ಗೆ ಜಲಜ ಅಧ್ಯಕ್ಷೆ

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಜಲಜ ಮತ್ತು ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿಯವರು ಅವಿರೋಧವಾಗಿ ಬುಧವಾರ ಆಯ್ಕೆಗೊಂಡಿದ್ದಾರೆ.
ಕಾಂಗ್ರೆಸ್ ಬೆಂಬಲಿತ 14 ಹಾಗೂ ಬಿಜೆಪಿ ಬೆಂಬಲಿತ 8 ಸದಸ್ಯರಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಪಂಚಾಯತ್‌ನ ಏಕೈಕ ಸದಸ್ಯೆಯಾಗಿರುವ ಜಲಜರವರು ಅರ್ಹರಾಗಿದ್ದರು. ಉಪಾಧ್ಯಕ್ಷ ಸ್ಥಾನವು ಬಿ ವರ್ಗದ ಮಹಿಳೆಯರಿಗೆ ಮೀಸಲಾಗಿದ್ದು ಕಾಂಗ್ರೆಸ್‌ನ ಪದ್ಮಾವತಿ ಶೆಟ್ಟಿ ಯವರು ನಾಮಪತ್ರ ಸಲ್ಲಿಸಿದ್ದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಎನ್.ರಾಜಣ್ಣರವರು ಚುನಾವಣ ಅಧಿಕಾರಿಯಾಗಿದ್ದರು. ಹಳೆಯಂಗಡಿ ಗ್ರಾಮ ಪಂಚಾಯತ್‌ನ ಪಿಡಿಒ ಅಬೂಬಕ್ಕರ್, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯ ವಸಂತ ಬೆರ್ನಾರ್ಡ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಜಲಜಾ, ಹಮೀದ್ ಸಾಗ್, ಅಬ್ದುಲ್ ಬಶೀರ್, ಪದ್ಮಾವತಿ ಶೆಟ್ಟಿ, ಅಬ್ದುಲ್ ಅಜೀಜ್, ಪ್ರವೀಣ್ ಸಾಲ್ಯಾನ್, ಶರ್ಮಿಳಾ ಎಸ್.ಕೋಟ್ಯಾನ್, ಮಾಲತಿ ಡಿ. ಕೋಟ್ಯಾನ್, ಗುಣವತಿ, ಚಂದ್ರಕುಮಾರ್, ಅನಿಲ್‌ಕುಮಾರ್, ಲೀಲಾ, ವಿನೋದ್‌ಕುಮಾರ್, ಬೇಬಿ ಸುಲೋಚನಾ, ಜೀವನ್ ಪ್ರಕಾಶ್, ಸುಗಂಧಿ, ಜಯಂತಿ, ಅಶೋಕ್ ಬಂಗೇರ, ಚಿತ್ರಾ ಸುಖೇಶ್  ಉಪಸ್ಥಿತರಿದ್ದರು.
Narendra Kerekadu

Mulki-08071506

Comments

comments

Comments are closed.

Read previous post:
Mulki-08071505
ಪಡುಪಣಂಬೂರು – ಮೋಹನ ದಾಸ ಆಯ್ಕೆ

ಮೂಲ್ಕಿ: ಹೋಬಳಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಮೋಹನದಾಸ ತೋಕೂರು ಹಾಗೂ ಉಪಾಧ್ಯಕ್ಷರಾಗಿ ಸುರೇಖಾ ಕರುಣಾಕರ್ ಕೆರೆಕಾಡು ಅವಿರೋಧವಾಗಿ...

Close