ಕಿಲ್ಪಾಡಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ್ ರಾವ್ ಆಯ್ಕೆ

ಮೂಲ್ಕಿ: ಮೂಲ್ಕಿ ಹೋಬಳಿ ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ಶ್ರೀಕಾಂತ್ ರಾವ್ ಅಧ್ಯಕ್ಷರಾಗಿ ಹಾಗೂ ಯಶೋಧಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಕಿಲ್ಪಾಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಟ್ಟು 9 ಸ್ಥಾನಗಳಲ್ಲಿ 6 ರಲ್ಲಿ ಬಿಜೆಪಿ ಹಾಗೂ 3 ರಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದ್ದಾರೆ. ಬಿಜೆಪಿ ಬಹುಮತ ಪಡೆದಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು ಬಿಜೆಪಿಯಿಂದ ಶ್ರೀಕಾಂತ್ ರಾವ್ ಹಾಗೂ ಕಾಂಗ್ರೆಸ್ ನಿಂದ ಗೋಪಿನಾಥ ಪಡಂಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಬಿಜೆಪಿಯ ಶ್ರೀಕಾಂತ್ ರಾವ್ 6-3 ಮತಗಳ ಅಂತರದಿಂದ ಜಯ ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯಿಂದ ಯಶೋಧಾ ಹಾಗೂ ಕಾಂಗ್ರೆಸ್ ನಿಂದ ಸಾವಿತ್ರಿ ಸ್ಪರ್ಧಿಸಿದ್ದು ಬಿಜೆಪಿಯ ಯಶೋಧಾ 6-3 ಮತಗಳ ಅಂತರದಿಂದ ಜಯ ಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಿಲ್ಪಾಡಿಯಲ್ಲಿ ಪ್ರಥಮ ಬಾರಿಗೆ ಬಿಜೆಪಿಯು ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದಿದೆ. ಈಶ್ವರ ಕಟೀಲು, ದೇವಪ್ರಸಾದ್ ಪುನರೂರು, ಕೆ ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Mulki-08071501

Comments

comments

Comments are closed.

Read previous post:
Kinnigoli-07071503
ಕೊಂಡೆಮೂಲ ಪಂಚಾಯಿತಿ

ಕಿನ್ನಿಗೋಳಿ: ನೂತನವಾಗಿ ಆರಂಭಗೊಂಡ ಕೊಂಡೆಮೂಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 10 ಕಾಂಗ್ರೇಸ್ 2 ಸ್ಥಾನ ಗಳಿಸಿದ್ದು ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಯ ಮಹಿಳಾ ಸದಸ್ಯರಿಗೆ...

Close