ಲಯನ್ಸ್ 2015-16 ನೇ ಸಾಲಿನ ಅಧ್ಯಕ್ಷ ಉದಯ ಅಮೀನ್

ಮೂಲ್ಕಿ: ಶಿಕ್ಷಣ,ಆರೋಗ್ಯ, ಸಮಾಜಿಕ ಸಹಕಾರ ಕ್ಷೇತ್ರಗಳಲ್ಲಿಲಯನ್ಸ್ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಜನಸಾಮಾನ್ಯರನ್ನು ಉನ್ನತೀಕರಣ ಗೊಳಿಸಲು ಲಯನ್ಸ್ ಇಂಟರ್‌ನ್ಯಾಷನಲ್ ಯೋಜನೆ ರೂಪಿಸಿದೆ ಎಂದು ಲಯನ್ಸ್ ಡಿಸ್ಟ್ರಿಕ್ಟ್ 317-ಡಿ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಎಂ.ಅರುಣ್ ಶೆಟ್ಟಿ ಹೇಳಿದರು.
ಮೂಲ್ಕಿ ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್ ಸಂಯೋಜನೆಯಲ್ಲಿ ಮೂಲ್ಕಿ ಲಯನ್ಸ್ ಸೌಧದಲ್ಲಿ ಬುಧವಾರ ರಾತ್ರಿನಡೆದ ಪದಗ್ರಹಣ ಸಮಾರಂಭದ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು.
ನಗು ಮತ್ತು ಅಳು ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿ ನಗುವಿನಿಂದ ನಮಗೆ ಉತ್ತಮ ಸ್ನೇಹಿತರ ಗಳಿಕೆಯಾದರೆ ಅಳು ಮಾನಸಿಕ ದುಗುಡವನ್ನು ಹೊರಹಾಕಿ ಶಾಂತಿಯ ಬಾಳ್ವೆಯನ್ನು ನೀಡುತ್ತದೆ. ಲಯನ್ಸ್ ಸದಸ್ಯರು ಗ್ರಾಮೀನ ಬಡವರ್ಗದ ಜನರಲ್ಲಿ ನಗುವನ್ನು ಕಂಡಿಕೊಳ್ಳುವ ಪ್ರಯತ್ನ ನಡೆಸಬೇಕು ಎಂದರು.
ಕಾರ್ಯಕ್ರದಲ್ಲಿ ಶುಭಾಶಂಸನೆ ಗೈದ ಲಯನ್ಸ್ ಮಾಜಿ ರಾಜ್ಯಪಾಲ ಧರ್ಮದರ್ಶಿ ಹರಿಕೃಷ್ಣ ಪುನರೂರು, ನಮ್ಮ ದುಂದು ವೆಚ್ಚಗಳನ್ನು ಕಡಿತ ಮಾಡಿ ಉಳಿಕೆ ಹಣವನ್ನು ಅರ್ಹ ಫಲಾನುಭವಿಗಳಿಗೆ ಶಿಕ್ಷಣ ಅಥವಾ ಆರೋಗ್ಯ ವಿಷಯವಾಗಿ ಸಹಕಾರ ನೀಡಬೇಕು. ಆಡಂಬರಕ್ಕಾಗಿ ಸಾಲ ಮಾಡಿ ನಡೆಸುವ ಸೇವಾ ಕಾರ್ಯಗಳು ಪರಿಪೂರ್ಣ ಎನಿಸದು ಎಂದರು.
ಈ ಸಂದರ್ಭ ಮೂಲ್ಕಿ ಲಯನ್ಸ್ 2015-16 ನೇ ಸಾಲಿನ ಅಧ್ಯಕ್ಷರಾಗಿ ಉದಯ ಅಮೀನ್ ಮಟ್ಟು,ಲಯನೆಸ್ ಅಧ್ಯಕ್ಷರಾಗಿ ವನಿತಾ ಯು.ಅಮೀನ್,ಲಿಯೋ ಅಧ್ಯಕ್ಷರಾಗಿ ಸ್ಪರ್ಷಾ ಅಮೀನ್ ಮತ್ತು ತಂಡ ಸದಸ್ಯರು ಪದಗ್ರಹಣಗೊಂಡರು.
ನಿರ್ಗಮನ ಭಾಷಣ ಮಾಡಿದ ದೇವಪ್ರಸಾದ್ ಪುನರೂರು ಸೇವೆಯಿಂದ ಸಂತೃಪ್ತಿ ಪಡೆಯಲು ಸಾಧ್ಯ ಎನ್ನುದನ್ನು ಲಯನ್ಸ್ ಅಧ್ಯಕ್ಷನಾಗಿ ಕಂಡುಕೊಂಡಿದ್ದೇನೆ ಎಂದರು.
ರೀಜನ್ ಚೇರ್‌ಮ್ಯಾನ್ ಯಾದವ ದೇವಾಡಿಗಾ, ಕ್ಯಾಬಿನೇಟ್ ಸೆಕ್ರೆಟರಿ ವಾಣಿ ಆಳ್ವಾ, ಜೋನ್ ಚೇಯರ್‌ಮ್ಯಾನ್ ದೇವಪ್ರಸಾದ್ ಪುನರೂರು ಮತ್ತು ಓಸ್ವಲ್ಡ್ ಡಿಸೋಜಾ,ಪ್ರಾಂಥ್ಯ ರಾಯಭಾರಿ ಲಾರೆನ್ಸ್ ಫೆರ್ನಾಂಡೀಸ್, ಲುನೆಸ್ ಅಧ್ಯಕ್ಷರಾದ ಶ್ರೇಯಾ ದೇವಪ್ರಸಾದ್,ವನಿತಾ ಉದಯ ಅಮೀನ್,ಲಿಯೋ ಅಧ್ಯಕ್ಷರಾದ ಕವನ್ ರಾಜ್ ಮತ್ತು ಸ್ಪರ್ಷಾ ಅಮೀನ್, ಕಾರ್ಯದರ್ಶಿಗಳಾದ ವಿಜಯ ಕುಮಾರ್ ಕುಬೆವೂರು ಮತ್ತು ಎಂ.ಪಿ.ಕಾಮತ್, ಜಿಲ್ಲಾ ಲಿಯೋ ಅಧ್ಯಕ್ಷ ವಿಮರ್ಶ ಆಳ್ವಾ ಮತ್ತು ಕಿನ್ನಿಗೋಳಿ, ಹಳೆಯಂಗಡಿ, ಸುರತ್ಕಲ್, ಮುಚ್ಚೂರು ನೀರುಡೆ, ನಿಟ್ಟೆ, ಕೃಷ್ಣಾಪುರ ಕಾಟಿಪಳ್ಳ, ನಿವ್‌ಮ್ಯಾಂಗಲೋರ್, ಗುರುಪುರ ಕೈಕಂಬ ಲಯನ್ಸ್ ಕ್ಲಬ್ ಅಧ್ಯಕ್ಷರು ವೇದಿಕೆಯಲ್ಲಿದ್ದರು.
ದೇವಪ್ರಸಾದ್ ಪುನರೂರು ಸ್ವಾಗತಿಸಿದರು,ಆಶಾ ರಾಮದಾಸ್ ನಿರೂಪಿಸಿದರು. ಎಂ.ಪಿ.ಕಾಮತ್ ವಂದಿಸಿದರು.

Bhagyavan Sanil

Mulki-08071503

Comments

comments

Comments are closed.

Read previous post:
Mulki-08071501
ಕಿಲ್ಪಾಡಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ್ ರಾವ್ ಆಯ್ಕೆ

ಮೂಲ್ಕಿ: ಮೂಲ್ಕಿ ಹೋಬಳಿ ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾದ ಶ್ರೀಕಾಂತ್ ರಾವ್ ಅಧ್ಯಕ್ಷರಾಗಿ ಹಾಗೂ ಯಶೋಧಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ....

Close