ಪಡುಪಣಂಬೂರು – ಮೋಹನ ದಾಸ ಆಯ್ಕೆ

ಮೂಲ್ಕಿ: ಹೋಬಳಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಮೋಹನದಾಸ ತೋಕೂರು ಹಾಗೂ ಉಪಾಧ್ಯಕ್ಷರಾಗಿ ಸುರೇಖಾ ಕರುಣಾಕರ್ ಕೆರೆಕಾಡು ಅವಿರೋಧವಾಗಿ ಬುಧವಾರ ಆಯ್ಕೆಯಾಗಿದ್ದಾರೆ.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ಒಟ್ಟಿ 16 ಸ್ಥಾನಗಳಲ್ಲಿ 15 ಸ್ಥಾನ ಪಡೆದಿದ್ದ ಬಿಜೆಪಿ ಅರ್ಹವಾಗಿಯೇ ಎರಡೂ ಸ್ಥಾನಕ್ಕೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಸ್ಪರ್ಧೆ ಇಲ್ಲದಿದ್ದರಿಂದ ಚುನಾವಣ ಅಧಿಕಾರಿಯಾದ ಶೇಷಕೃಷ್ಣರಾವ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಗ್ರಾಮ ಪಂಚಾಯತ್‌ನ ಪಿಡಿಒ ಅನಿತಾ ಕ್ಯಾಥರಿನ್ ಸಹಕರಿಸಿದರು.
ಗ್ರಾಮ ಪಮಚಾಯತ್‌ನ ಸದಸ್ಯರಾದ ವಿನೋದ್ ಸಾಲ್ಯಾನ್, ಪುಷ್ಪವತಿ, ಲೀಲಾ ಬಂಜನ್, ಸಂತೋಷ್‌ಕುಮಾರ್, ಹೇಮನಾಥ, ದಿನೇಶ್ ಕುಲಾಲ್, ವನಜ, ಸಂಪಾವತಿ, ಪುಷ್ಪ ಯಾನೆ ಶ್ವೇತ, ಕುಸುಮ, ಹರಿಪ್ರಸಾದ್, ಉಮೇಶ್ ಪೂಜಾರಿ, ಜೀತೇಂದ್ರ, ಮಂಜುಳ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಬಿಜೆಪಿ ನಾಯಕರಾದ ಉಮಾನಾಥ ಕೋಟ್ಯಾನ್, ವಿನೋದ್ ಬೊಳ್ಳೂರು, ರಂಗನಾಥ ಶೆಟ್ಟಿ, ಕರುಣಾಕರ್, ದೇವಪ್ರಸಾದ ಪುನರೂರು, ಭುವನಾಭಿರಾಮ ಉಡುಪ, ದಿವೇಶ್ ಕೆರೆಕಾಡು, ಪರಮೇಶ್ವರ್ ತೋಕೂರು, ಈಶ್ವರ ಕಟೀಲು ಇತ್ತಿತರರು ಅಭಿನಂದಿಸಿದರು.

Narendra Kerekadu

Mulki-08071505

Comments

comments

Comments are closed.

Read previous post:
Mulki-08071504
ಅತಿಕಾರಿ ಬೆಟ್ಟು – ಶಾರದಾ ವಸಂತ್ ಆಯ್ಕೆ

ಮೂಲ್ಕಿ: ನೂತನವಾಗಿ ನಿರ್ಮಾಣಗೊಂಡ ಅತಿಕಾರಿ ಬೆಟ್ಟು ಪಂಚಾಯತಿಯ ಚೊಚ್ಚಲ ಅಧ್ಯಕ್ಷರಾಗಿ ಶಾರದಾ ವಸಂತ್ ಮತ್ತು ಉಪಾಧ್ಯಕ್ಷರಾಗಿ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಆಯ್ಕೆಯಾಗಿದ್ದಾರೆ. 10 ಸದಸ್ಯ ಬಲದ ಅತಿಕಾರಿಬೆಟ್ಟು...

Close