ಕಟೀಲು ಬಲ್ಲಣ ಬಳಿ ಬಸ್ ಪಲ್ಟಿ

ಕಿನ್ನಿಗೋಳಿ: ಬಜಪೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಕಟೀಲು ಚರ್ಚ್ ಬಳಿಯ ಬಲ್ಲಣದಲ್ಲಿ ರಸ್ತೆಯ ಎಡ ಬದಿಯ ಮಣ್ಣು ಕುಸಿದು ಪಕ್ಕದ ಕಮರಿಗೆ ಬಿದ್ದು 12 ಮಂದಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಯ ಹೊತ್ತಿಗೆ ಬಿ.ಸಿ.ರೋಡ್‌ನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಬಸ್ ಕಟೀಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಇಳಿಸಿದ ಬಳಿಕ 20 ಪ್ರಯಾಣಿಕರು ಬಸ್‌ನಲ್ಲಿದ್ದರು. ಬಲ್ಲಣದ ಬಳಿ ಬಸ್ ರಸ್ತೆಯಂಚಿಗೆ ಹೋದಾಗ ಬದಿಯ ಮಣ್ಣು ಕುಸಿದು ಪಲ್ಟಿಯಾಗಿ ಬಿತ್ತು ಎಂದು ಬಸ್‌ನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಧಿಕಾ, ಗೀತಾ, ಬಾಲಚಂದ್ರ ಗಂಭೀರ ಗಾಯಗೊಂಡು ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ದಾಖಾಲಾಗಿದ್ದಾರೆ.
ಪ್ರತಾಪ್ ಮಲ್ಲೂರು, ಯಶವಂತ ಮಲ್ಲೂರು, ಪ್ರಶಾಂತ್ ನಾಯಕ್ ಕಟೀಲು, ಹರಿಣಾಕ್ಷಿ ಸುಂಕದ ಕಟ್ಟೆ , ವೆಂಕಟೇಶ್ ಬಜಪೆ, ಶಿವ ಪ್ರಸಾದ್ ಕಾವೂರು, ಅಂಜಲಿ, ಶ್ರೀಶ ಭಟ್ ಎಕ್ಕಾರು, ಯೋಗೀತ ಗಂಜಿಮಠ ಗಾಯಗೊಂಡು ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಗೆ ದಾಖಾಲಾಗಿದ್ದಾರೆ.
ಮೂಡಬಿದ್ರೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಸಚಿವ ಅಭಯಚಂದ್ರ ಜೈನ್ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ನೀಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತ್ವರಿತವಾಗಿ ಆತ್ರಾಡಿ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಕಟೀಲು ಮೂರುಕಾವೇರಿ ರಸ್ತೆಯ ಕೆಲವು ಕಡೆ ಅಗಲೀಕರಣ ಹಾಗೂ ಕೆಲವು ಕಡೆಗಳಲ್ಲಿ ತಡೆ ಗೋಡೆ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಪರಿಸರದಲ್ಲಿ ಹಲವು ವರ್ಷಗಳಿಂದ ಅಪಘಾತ ನಡೆಯುತ್ತಿದ್ದು ಮೂರು ತಿಂಗಳ ಹಿಂದೆಯಷ್ಟೇ ಖಾಸಗಿ ಹಾಗೂ ಪ್ರವಾಸಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದು ಹಲವರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಮೂರುಕಾವೇರಿಯಿಂದ ಕಟೀಲುವರೆಗೆ ಹಲವಾರು ಹೇರ್ ಪಿನ್ ತಿರುವುಗಳಿದ್ದು ಅಪಘಾತ ವಲಯವೆಂದೇ ಪ್ರಸಿದ್ದಿಯಾಗಿವೆ.

Kinnigoli-9071501 Kinnigoli-9071502 Kinnigoli-9071503 Kinnigoli-9071504 Kinnigoli-9071505

Comments

comments

Comments are closed.

Read previous post:
Mulki-08071506
ಹಳೆಯಂಗಡಿ ಗ್ರಾ.ಪಂ.ಗೆ ಜಲಜ ಅಧ್ಯಕ್ಷೆ

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಜಲಜ ಮತ್ತು ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿಯವರು ಅವಿರೋಧವಾಗಿ ಬುಧವಾರ ಆಯ್ಕೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ 14 ಹಾಗೂ...

Close