ಕೆಮ್ರಾಲ್ ಗ್ರಾ.ಪಂ. ಬಿಜೆಪಿ ತೆಕ್ಕೆಗೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ 17 ಸದಸ್ಯರ ಸಂಖ್ಯಾ ಬಲವಿದ್ದು ಬಿಜೆಪಿ 9 ಕಾಂಗ್ರೇಸ್ 8 ಸ್ಥಾನ ಗಳಿಸಿದೆ. ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತ ನಾಗೇಶ್ ಎಮ್ ಅಂಚನ್ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತೆ ತುಳಸಿ ಶೆಟ್ಟಿಗಾರ್ ವಿಜಯಿಯಾದರು. ಕಾಂಗ್ರೇಸ್ ಬೆಂಬಲಿತ ಸುರೇಶ್ ಪಂಜ ಹಾಗೂ ಕಾಂಗ್ರೇಸ್ ಬೆಂಬಲಿತೆ ರೇವತಿ ಶೆಟ್ಟಿಗಾರ್ ಕ್ರಮವಾಗಿ 9-8 ಮತಗಳ ಅಂತರದಿಂದ ಸೋಲುಂಡರು. ಬಿಜೆಪಿ ಕಾರ್ಯಕರ್ತರು ವಿಜೇತರಿಗೆ ಅಭಿನಂದಿಸಿದರು.

Kinnigoli-9071509

Comments

comments

Comments are closed.

Read previous post:
Kinnigoli-9071506
ಕಿನ್ನಿಗೋಳಿ : ಕೃಷಿ ತಾಂತ್ರಿಕ ಮಾಹಿತಿ

ಕಿನ್ನಿಗೋಳಿ: ಕೃಷಿಯ ಬಗ್ಗೆ ಮಾಹಿತಿ ಕೊರತೆ ಹಾಗೂ ಮಧ್ಯವರ್ತಿಗಳ ತೊಂದರೆಯಿಂದ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ನುರಿತ ಕೃಷಿ ತಂತ್ರಜ್ಞಾನ ಅವಿಷ್ಕಾರಗಳನ್ನು ಸದುಪಯೋಗಪಡಿಸಿಕೊಂಡು ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಬೆಳೆಗಳನ್ನು...

Close