ಕಿನ್ನಿಗೋಳಿ : ಕೃಷಿ ತಾಂತ್ರಿಕ ಮಾಹಿತಿ

ಕಿನ್ನಿಗೋಳಿ: ಕೃಷಿಯ ಬಗ್ಗೆ ಮಾಹಿತಿ ಕೊರತೆ ಹಾಗೂ ಮಧ್ಯವರ್ತಿಗಳ ತೊಂದರೆಯಿಂದ ರೈತರು ನಷ್ಟ ಅನುಭವಿಸುತ್ತಾರೆ. ಆದರೆ ನುರಿತ ಕೃಷಿ ತಂತ್ರಜ್ಞಾನ ಅವಿಷ್ಕಾರಗಳನ್ನು ಸದುಪಯೋಗಪಡಿಸಿಕೊಂಡು ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಬಷೀರ್ ಹೇಳಿದರು.
ಗುರುವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ರೈತಬಾಂಧವರೊಂದಿಗೆ ಸಂವಾದ ತಾಂತ್ರಿಕ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು
ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್ ನಾಗರಾಜ್, ಉಪ ಕೃಷಿ ನಿರ್ದೇಶಕ ಮುನಿಯ ಗೌಡ, ತಾ. ಪಂ. ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ವಿ ಜಾನಕಿ, ಸಹಾಯಕ ಕೃಷಿ ಅಧಿಕಾರಿ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Kinnigoli-9071506

Comments

comments

Comments are closed.

Read previous post:
Kinnigoli-9071501
ಕಟೀಲು ಬಲ್ಲಣ ಬಳಿ ಬಸ್ ಪಲ್ಟಿ

ಕಿನ್ನಿಗೋಳಿ: ಬಜಪೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಕಟೀಲು ಚರ್ಚ್ ಬಳಿಯ ಬಲ್ಲಣದಲ್ಲಿ ರಸ್ತೆಯ ಎಡ ಬದಿಯ ಮಣ್ಣು ಕುಸಿದು ಪಕ್ಕದ ಕಮರಿಗೆ ಬಿದ್ದು 12 ಮಂದಿ...

Close