ಮೆನ್ನಬೆಟ್ಟು ಪಂಚಾಯಿತಿ ಬಿಜೆಪಿ ಆಡಳಿತ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 7, ಕಾಂಗ್ರೇಸ್ 4 ಗಳಿಸಿದ್ದು ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಾಗಿದ್ದು ಬಿಜೆಪಿ ಬೆಂಬಲಿತೆ ಸರೋಜಿನಿ ಹಾಗೂ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನವು ಮೀಸಲಾಗಿದ್ದು ಬಿಜೆಪಿ ಬೆಂಬಲಿತ ಮೊರ್ಗನ್ ವಿಲಿಯಂ ಸಾಲಿನ್ಸ್ ವಿಜಯಿಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಸುಶೀಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಸುನೀಲ್ ಸಿಕ್ವೇರಾ ಸ್ಪರ್ಧಿಸಿ ಇಬ್ಬರೂ 7-4 ಮತಗಳ ಅಂತರಗಳಿಂದ ಸೋಲುಂಡಿದ್ದಾರೆ.
ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ. ಎಂ. ಎನ್. ರಾಜಣ್ಣ ಚುನಾವಣಾಧಿಕಾರಿಯಾಗಿದ್ದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಈಶ್ವರ ಕಟೀಲು, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಸುದರ್ಶನ್, ಜನಾರ್ಧನ ಕಿಲೆಂಜೂರು, ಬೇಬಿ ಸುಂದರ ಕೋಟ್ಯಾನ್, ಲೀಲಾ ಭಂಜನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10071504 Kinnigoli-10071505

Comments

comments

Comments are closed.

Read previous post:
Kinnigoli-10071501
ರೋಟರಿ ಪದಾಧಿಕಾರಿಗಳ ಪದಗ್ರಹಣ

ಕಿನ್ನಿಗೋಳಿ: ಕಾರ್ಯತತ್ಪರರಾಗಿ ಕ್ರಿಯಾಶೀಲತೆಯಿಂದ ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಸೇವೆ ನೀಡುವಲ್ಲಿ ರೋಟರಿ sಸದಸ್ಯರು ಕಾರ್ಯತತ್ಪರರಾಗಬೇಕು. ಎಂದು ಮಾಜಿ ಗವರ್ನರ್ ಕೃಷ್ಣ ಶೆಟ್ಟಿ ಹೇಳಿದರು. ಸೋಮವಾರ ಕಿನ್ನಿಗೋಳಿ ರೋಟರಿ...

Close