ರೋಟರಿ ಪದಾಧಿಕಾರಿಗಳ ಪದಗ್ರಹಣ

ಕಿನ್ನಿಗೋಳಿ: ಕಾರ್ಯತತ್ಪರರಾಗಿ ಕ್ರಿಯಾಶೀಲತೆಯಿಂದ ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಸೇವೆ ನೀಡುವಲ್ಲಿ ರೋಟರಿ sಸದಸ್ಯರು ಕಾರ್ಯತತ್ಪರರಾಗಬೇಕು. ಎಂದು ಮಾಜಿ ಗವರ್ನರ್ ಕೃಷ್ಣ ಶೆಟ್ಟಿ ಹೇಳಿದರು.
ಸೋಮವಾರ ಕಿನ್ನಿಗೋಳಿ ರೋಟರಿ ರಜತಭಾವನದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ನೂತನ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ ಮತ್ತು ಕಾರ್ಯದರ್ಶಿ ಜೆರಾಲ್ಡ್ ಮಿನೇಜಸ್ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು ರೋಟರಿ ವಲಯ 3ರ ಸಹಾಯಕ ಗವರ್ನರ್ ಕೆ. ಸತ್ಯೇಂದ್ರ ಪೈ ಅವರು ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಸಂಪಾದಕತ್ವದ ಕಿನ್ನಿಗೋಳಿ ರೋಟರಿ ಮುಖವಾಣಿ “ಸಿಂಚನ” ಬಿಡುಗಡೆಗೊಳಿಸಿದರು. ವಲಯ ಸೇನಾನಿ ರಾಬರ್ಟ್ ಪ್ರಾಂಕ್ಲಿನ್ ರೇಗೋ ವೇದಿಕೆಯಲ್ಲಿದ್ದರು. ನಿಕಟ ಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ ಸ್ವಾಗತಿಸಿ, ನಿಕಟ ಪೂರ್ವ ಕಾರ್ಯದರ್ಶಿ ಗಂಗಾಧರ ಶೆಟ್ಟಿ ವಾರ್ಷಿಕ ವರದಿ ನೀಡಿದರು. ಕಾರ್ಯದರ್ಶಿ ಜೆರಾಲ್ಡ್ ಮಿನೇಜಸ್ ವಂದಿಸಿ, ಮೈಕಲ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
Kinnigoli-10071501 Kinnigoli-10071502 Kinnigoli-10071503

Comments

comments

Comments are closed.

Read previous post:
Kinnigoli-9071509
ಕೆಮ್ರಾಲ್ ಗ್ರಾ.ಪಂ. ಬಿಜೆಪಿ ತೆಕ್ಕೆಗೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿಯಲ್ಲಿ 17 ಸದಸ್ಯರ ಸಂಖ್ಯಾ ಬಲವಿದ್ದು ಬಿಜೆಪಿ 9 ಕಾಂಗ್ರೇಸ್ 8 ಸ್ಥಾನ ಗಳಿಸಿದೆ. ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ...

Close