ತಿರುವು ಮುರುವು ಕಟೀಲು ಮೂರುಕಾವೇರಿ ರಸ್ತೆ

ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಕಟೀಲು ದೇವಳ, ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಂಪರ್ಕ ರಸ್ತೆಯಾಗಿರುವ ಆತ್ರಾಡಿ- ಮಂಗಳೂರು ರಾಜ್ಯ ಹೆದ್ದಾರಿಯ ಮಧ್ಯದಲ್ಲಿರುವ ಮೂರುಕಾವೇರಿ-ಬಲ್ಲಣ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳೀಂದ ಅನೇಕ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಇದಕ್ಕೆ ಕಾರಣ ಕೇವಲ ಅವೈಜ್ಞಾನಿಕ ತಿರುವುನಿಂದ ಕೂಡಿದ ರಸ್ತೆ. ಈ ಪರಿಸರದಲ್ಲಿ ೮ ತಿರುವುಗಳಿದ್ದು, ಪಕ್ಕದಲ್ಲಿ ಕಂದಕಗಳಿರುವ ೫ ಅಪಾಯಕಾರಿ ತಿರುವುಗಳಿವೆ. ಇಲ್ಲಿ ತಿಂಗಳಿಗೆ ಕನಿಷ್ಟ ೩-೪ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಕಳೆದ ೩ ತಿಂಗಳಲ್ಲಿ ೨ ದೊಡ್ಡ ಅಪಘಾತಗಳು ಸಂಭವಿಸಿದ್ದು ಇದರಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಖಾಸಗಿ ಹಾಗೂ ಪ್ರವಾಸಿ ಬಸ್ಸುಗಳು ಪರಸ್ಪರ ಡಿಕ್ಕಿ ಹೊಡೆದು ಹಲವರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಮೂರುಕಾವೇರಿಯಿಂದ ಕಟೀಲುವರೆಗೆ ಹೇರ್ ಪಿನ್ ತಿರುವುಗಳಿದ್ದು ಅಪಘಾತ ವಲಯವೆಂದೇ ಪ್ರಸಿದ್ದಿಯಾಗಿವೆ.
ತಿರುವು ಮುರುವು ರಸ್ತೆಯಿಂದ ಕೋಡಿದ ಈ ಪ್ರದೇಶದ ಎರಡೂ ಬದಿಯಲ್ಲಿ ಇಕ್ಕಾಟದ ಜಾಗವಿದ್ದು ಕೆಲವು ಕಡೆ ರಸ್ತೆಯ ಬದಿಯೇ ಕಂದಕಗಳಿದೆ. ಮಳೆಗಾಲದಲ್ಲಿ ಮಣ್ಣುಕುಸಿತ ಅಥವಾ ವಾಹನಗಳ ಚಕ್ರಗಳು ಹುಲ್ಲುಗಳಿಂದಾಗಿ ಜಾರಿ ರಸ್ತೆ ಬದಿಗೆ ಹೊರಳುವ ಸಮಸ್ಯೆಗಳೆ ಜಾಸ್ತಿಯಾಗಿವೆ. ವಾಹನ ಸವಾರರು ಸ್ವಲ್ಪ ಏರುಪೇರಾದರೂ ಹೊಂಡಕ್ಕೆ ಬೀಳುವುದು ಗ್ಯಾರಂಟಿ. ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳವಿರುವುದರಿಂದ ರಾಜ್ಯಾದ್ಯಂತ ಭಕ್ರರು ಪ್ರಯಾಣಿಕರು ಇದೇ ದಾರಿಯ ಮೂಲಕ ಒಡಾಡುತ್ತಿರುತ್ತಾರೆ. ಹಾಗಾಗಿ ವಾಹನಗಳ ದಟ್ಟಣೆ ಕೂಡಾ ಜಾಸ್ತಿಯಾಗಿದೆ. ಪ್ರವಾಸಿ ವಾಹನಗಳಿಗೆ ಇಲ್ಲಿನ ರಸ್ತೆಯ ಪರಿಚಯವಿಲ್ಲದೆ ವಾಹನ ಅಪಘಾತಕ್ಕೀಡಾಗುವುದು ಗ್ಯಾರಂಟಿ. ಹೇರ್‌ಪಿನ್ ತಿರುವುಗಳು ಹಾಗೂ ರಸ್ತೆ ಪಕ್ಕದಲ್ಲೇ ಕಂದಕಗಳಿರುವುದರಿಂದ ವಾಹನ ಚಾಲಕರು ಸ್ವಲ್ಪ ಏಮಾರಿದರೂ ಸಂಕಷ್ಟಕ್ಕಿಡಾಗುತ್ತಾರೆ. ಅಪಘಾತ ಪ್ರದೇಶವೆಂದು ಅರಿವಿದ್ದರೂ ಹೆಚ್ಚಿನವರು ಅತೀ ವೇಗದಲ್ಲಿ ತಮ್ಮ ವಾಹನಗಳನ್ನು ಚಲಾಯಿಸುವುದು ವಿಪರ್ಯಾಸ. ಅಪಾಯಕಾರಿ ತಿರುವು ಇರುವುದರಿಂದ ಇನ್ನೊಂದು ಕಡೆಯಲ್ಲಿ ಬರುವ ವಾಹನ ಕಾಣುವುದೂ ಇಲ್ಲ. ಕಾಲ ಕಾಲಕ್ಕೆ ಕೆಲವು ಸಂಘ ಸಂಸ್ಥೆಗಳು ಗಿಡ ಗಂಟಿಗಳನ್ನು ನಿವಾರಿಸುವುದರಿಂದ ಅಪಘಾತದ ಪ್ರಮಾಣ ಕಡಿಮೆಯಾಗಿದೆ.
.
ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾರ್ಯ ಮತ್ತು ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲೇಬೇಕಾದ ಪ್ರಮೇಯ ಬಂದೊದಗಿದೆ.

ಆತ್ರಾಡಿ-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಕಟೀಲು ಮೂರುಕಾವೇರಿ ರಸ್ತೆಯ ಕೆಲವು ಕಡೆ ಅಗಲೀಕರಣ ಹಾಗೂ ಕೆಲವು ಕಡೆಗಳಲ್ಲಿ ಮಣ್ಣು ತುಂಬಿಸಿ ರಸ್ತೆ ಗಟ್ಟಿ ಮಾಡುವ ಕಾಮಾಗಾರಿ ಹಾಗೂ ತಡೆ ಗೋಡೆ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಗಲೀಕರಣದ ಪ್ರಸ್ತಾವನೆ ಯೋಜನೆ ಸಾಕಾರಗೊಂಡು ಕಾರ್ಯರೂಪಕ್ಕೆ ಬರುವಾಗ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಕೆ. ಅಭಯಚಂದ್ರ ಜೈನ್
ಮುಲ್ಕಿ ಮೂಡಬಿದ್ರಿ ಶಾಸಕರು

ರಸ್ತೆಯ ಇಕ್ಕೆಲಗಳ ಗಿಡ ಗಂಟಿಗಳನ್ನು ಕಾಲಾನುಕಾಲ ಕತ್ತರಿಸುವುದರಿಂದ ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆ ತಿರುವು ರಸ್ತೆಯ ಮುತುವರ್ಜಿಯಿಂದ ಗಮನ ಇಡಬೇಕಾಗಿದೆ. ತಿರುವುಗಳಲ್ಲಿ ಅತೀವೇಗವಾಗಿ ಸಾಗುವ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ. ಇಲ್ಲಿ ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅಕಾರಿ ಮಟ್ಟದಲ್ಲಿ ಶೀಘ್ರ ಚಾಲನೆ ದೊರಕಬೇಕಾಗಿದೆ.
ಈಶ್ವರ್ ಕಟೀಲ್
ದ.ಕ. ಜಿಲ್ಲಾಪಂಚಾಯಿತಿ ಸದಸ್ಯರು. ಕಟೀಲು ಕ್ಷೇತ್ರ

ಮೂರುಕಾವೇರಿ ಅಪಘಾತ ವಲಯ
ಮೆನ್ನಬೆಟ್ಟು ಕಿನ್ನಿಗೋಳಿ ಮತ್ತು ಐಕಳ, ಗ್ರಾಮ ಪಂಚಾಯತ್‌ಗಳ ಸಂಗಮ ಸ್ಥಳವೆನಿಸಿರುವ ಮೂರುಕಾವೇರಿಯಲ್ಲಿ ವಾಹನಗಳ ಸಂಚಾರ ಅವ್ಯವಸ್ಥಿತವಾಗಿದ್ದು, ಮೂಡಬಿದ್ರೆ, ಕಟೀಲು, ಬೆಳ್ಮಣ್, ಬಳ್ಕುಂಜೆ, ಕಿನ್ನಿಗೋಳಿ, ಮುಲ್ಕಿ ಕಡೆಗೆ ದಿನನಿತ್ಯ ಸಂಚರಿಸುತ್ತಿರುವ ಸಾವಿರಾರು ವಾಹನಗಳು ಏಕಕಾಲದಲ್ಲಿ ತದ್ವಿರುದ್ಧವಾಗಿ ಒಂದಾಗುವಾಗ ಇಲ್ಲಿ ಪಾದಾಚಾರಿಗಳಿಗೆ, ವಿದ್ಯಾರ್ಥಿಗಳಿಗೆ ಅತ್ತಿತ್ತ ನಡೆದಾಡಲು ತೊಂದರೆಯಾಗುತ್ತಿದೆ. ಕಟೀಲು, ಐಕಳ, ಮೂಡಬಿದ್ರೆ, ಕಿನ್ನಿಗೋಳಿ ಪರಿಸರದ ಸಾವಿರಾರು ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಬಸ್ಸಿಗಾಗಿ ಪರದಾಡಬೇಕಾದ ಪರಿಸ್ಥಿತಿ ದಿನನಿತ್ಯ ಒದಗಿ ಬರುತ್ತಿದೆ. ಚಾಲಕರು ಇಲ್ಲಿ ಅತೀವೇಗವಾಗಿ ಸಂಚರಿಸಿ ದ್ವಿಚಕ್ರ, ಚತುಷ್ಚಕ್ರ ಸವಾ ರರಿಗೆ ಕಂಟಕ ವನ್ನುಂಟು ಮಾಡು ತ್ತಾರೆ. ಇಲ್ಲಿ ಇಕ್ಕೆಲಗಳಲ್ಲೂ ರಸ್ತೆ ಅಗಲೀಕರಣ ಹಾಗೂ ಸರ್ಕಲ್‌ನ ಅವಶ್ಯಕತೆ ಇದೆ ಎಂದು ಬಲವಾದ ಕೂಗು ಕೇಳಿ ಬರುತ್ತಿದೆ. ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ತ್ವರಿತ ಗಮನ ಕೊಡಬೇಕಾಗಿದೆ. ಇಲ್ಲಿ ದಿನನಿತ್ಯವು ಟ್ರಾಫಿಕ್ ಜಾಮ್ ನಡೆಯುತ್ತಿದ್ದು ಮಳೆಗಾಲದಲ್ಲಿ ಮೂರುಕಾವೇರಿ ಜಂಕ್ಷನ್‌ನಲ್ಲಿ ನೀರು ತುಂಬುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಕೆಲವು ತಿಂಗಳುಗಳ ಹಿಂದಿನಿಂದ ಗೃಹ ರಕ್ಷಕ ಪಡೆಯ ಸಿಬ್ಬಂದಿಗಳ ನೇಮಕವಾಗಿದ್ದರಿಂದ ಟ್ರಾಫಿಕ್ ಜಾಮ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ. ಐಕಳ ಗ್ರಾಮ ಪಂಚಾಯಿತಿ ಪ್ರತೀ ವರ್ಷ ತೋರಿಕೆಯ ಚರಂಡಿ ವ್ಯವಸ್ಥೆ ಮಾಡುತ್ತಿದ್ದರೂ ಕೇವಲ ಎರಡು ದಿನ ಸರಿಯಿದ್ದು ಮೂರನೇ ದಿನ ನೀರು ನಿಲ್ಲುವುದು ಮಾತ್ರ ಕಡಿಮೆಯಾಗುವುದಿಲ್ಲ. ಬದಲಾಗುತ್ತಿರುವ ಕಾಲದಲ್ಲಿ ವ್ಯವಸ್ಥೆಗೆ ಹೊಂದಿಕೊಂಡು ಹೋಗುವ ವ್ಯವದಾನವನ್ನು ತೋರಿದಲ್ಲಿ ಈ ಸಮಸ್ಯೆಗಳಿಗೆ ಉತ್ತರವನ್ನು ಕಂಡುಹುಡುಕಬಹುದಾಗಿದೆ. ಈ ಬಗ್ಗೆ ತಕ್ಷಣ ಸಂಬಂಧ ಪಟ್ಟವರು ಸ್ಪಂದಿಸ ಬೇಕಾಗಿದೆ. ಮುಲ್ಕಿ ಮೂಡಬಿದ್ರೆ ರಾಜ್ಯ ಹೆದ್ದಾರಿ ಶೀಘ್ರ ಅಗಲೀಕರಣಗೊಂಡರೆ ಅಪಘಾತ ಫೂರ್ಣ ಕಡಿಮೆಯಾಗಲಿದೆ.

ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಮೂರುಕಾವೇರಿಯಲ್ಲಿ ಕಿನ್ನಿಗೋಳಿ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣದಿಂದಾಗಿ ಸಾರ್ವಜನಿಕರು ಬಹಳಷ್ಟು ಪ್ರಯೋಜನ ಕಂಡುಕೊಂಡಿದ್ದಾರೆ. ಆದರೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ತಂಗುದಾಣ ಹಾಗೂ ಬದಿಯ ರಸ್ತೆ ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ.

Kinnigoli-130705 Kinnigoli-130706 Kinnigoli-130707 Kinnigoli-130708

Comments

comments

Comments are closed.

Read previous post:
Mulki-130704
ಬಿಜೆಪಿ ವಿಜಯೋತ್ಸವ

ಮೂಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ಅಂಚನ್ ಮತ್ತು ಉಪಾದ್ಯಕ್ಷೆ ಸುಶೀಲಾ ಹಾಗೂ ವಿಜೇತ ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಪಕ್ಷಿಕೆರೆ ಯಲ್ಲಿ ಬಿಜೆಪಿ ಕಾರ್ಯಕರ್ತರು...

Close