ನೂತನ ಪಠ್ಯಕ್ರಮಗಳ ಬಗ್ಗೆ ಮಾಹಿತಿ

ಮೂಲ್ಕಿ: ಸತತ ಅಧ್ಯಯನಸೀಲತೆಯಿಂದ ಮಾತ್ರ ಪರಿಣಾಮಕಾರಿ ಶಿಕ್ಷಣ ಸಾಧ್ಯವಾಗಿಲಿದ್ದು ಉಪಮ್ಯಾಸಕರು ಅಧ್ಯಯನಶೀಲರಾಗಿ ವಿವಿಧ ಕಾರ್ಯಾಗಾರಗಳಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸಿದಲ್ಲಿ ಉನ್ನತಿ ಸಾಧ್ಯ ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು.
ಮಂಗಳೂರು ವಿಶ್ವ ವಿದ್ಯಾನಿಲಯ ವಾಣಿಜ್ಯ ಶಾಸ್ತ್ರ ಅದ್ಯಾಪಕರ ಸಂಘ (ಮುಕ್ತಾ) ಮತ್ತು ಮೂಲ್ಕಿ ವಿಜಯಾ ಕಾಲೇಜು ಸಹಯೋಗದಲ್ಲಿ ನೂತನ ಪಠ್ಯಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್ ಶಂಕರ್ ವಹಿಸಿದ್ದರು.
ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್ ಕುಡ್ವಾ,ಉಪಸ್ಥಿತರಿದ್ದರು.

ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು, ಮುಕ್ತಾ ಅಧ್ಯಕ್ಷ ಪ್ರೊ.ಎಂ.ಶ್ರೀಪಾದ ಪ್ರಸ್ತಾವಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶರ್ಮಿಳಾ ರಾಜೇಶ್ ನಿರೂಪಿಸಿದರು. ಮುಕ್ತಾ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ ವಂದಿಸಿದರು.

Bhagyavan Sanil

Mulki-13071501

Comments

comments

Comments are closed.

Read previous post:
Kinnigoli-110701
ಭಾರತ ಭತ್ತದ ತಳಿಗಳ ಕಣಜ

ಕಿನ್ನಿಗೋಳಿ: ಭಾರತ ಭತ್ತದ ತಳಿಗಳ ಕಣಜ. ಹಳ್ಳಿಯ ಜೀವನ ಮೈಗೂಡಿಸಿದ ರೈತರು ಭತ್ತದ ಕೃಷಿ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದ್ದಾರೆ. ಆಯಾ ಪ್ರದೇಶ, ವಾತಾವರಣ, ಆಹಾರ ಪದ್ಧತಿಗೆ ಸೂಕ್ತವಾದ...

Close