ಯಕ್ಷಗಾನ ಮಾಹಿತಿ ಕಾರ್ಯಕ್ರಮ

ಮೂಲ್ಕಿ: ಕೇಂದ್ರ ಸರ್ಕಾರದ ಜನಪ್ರೀಯ ಯೋಜನೆಗಳು ಗ್ರಾಮೀಣ ಬಡ ಜನರ ಅರಿವಿಗೆ ಬರುವಂತೆ ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸುವುದು ಸ್ತುತ್ಯರ್ಹ ಎಂದು ಕಿಲ್ಪಾಡಿ ಪಂಚಾಯತಿ ಸದಸ್ಯ ಮತ್ತು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಗೋಪೀನಾಥ ಪಡಂಗ ಹೇಳಿದರು.
ನೆಹರೂ ಯುವ ಕೇಂದ್ರ ಮಂಗಳೂರು ಮತ್ತು ಬಾರತ ಸರಕಾರ ಗೀತೆ ಮತ್ತು ನಾಟಕ ವಿಭಾಗ ಬೆಂಗಳೂರು, ವಾರ್ತಾ ಮತ್ತು ಪ್ರಸಾರ ಇಲಾಖೆ ಇದರ ವತಿಯಿಂದ ನವದುರ್ಗಾ ಯುವಕ ವೃಂದ ಮೂಲ್ಕಿ ಇದರ ಆಶ್ರಯದಲ್ಲಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಹಕಾರದಲ್ಲಿ ಭಾನುವಾರ ಕರ್ನಾಟಕ ಕಲಾದರ್ಶಿನಿ(ರಿ) ಅವರಿಂದ ಜನಜಾಗೃತಿ ಹಾಗೂ ಯಕ್ಷಗಾನ ಕಾರ‍್ಯಕ್ರಮವನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಶಿಕ್ಷಣ, ದುಶ್ಚಟಗಳ ನಿರ್ಮೂಲನ, ಪರಿಸರ ನೈರ್ಮಲ್ಯ, ಆರೋಗ್ಯ ಹಾಗೂ ಆರ್ಥಿಕ ಸದೃಡತೆಗಾಗಿ ಸರ್ಕಾರದ ಉತ್ತಮ ಯೋಜನೆಗಳ ಬಗ್ಗೆ ನೀಡಲಾಗುವ ಮಾಹಿತಿ ಪಡೆದು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಮಾಜಿ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್ ವಹಿಸಿದ್ದರು. ಯುವವಾಹಿನಿ ಅಧ್ಯಕ್ಷ ಸತೀಶ್ ಕುಮಾರ್, ಸಂಘಟಕ ಶ್ರೀಧರ ಕಾಂಚನ್, ಮೂಲ್ಕಿ ಪಟ್ಟಣ ಪಂಚಾಯತಿ ಸದಸ್ಯ ಹರ್ಷರಾಜಶೆಟ್ಟಿ ಜಿಎಂ, ನವದುರ್ಗಾ ಯುವಕ ವೃಂದದ ಉಪಾಧ್ಯಕ್ಷ ಜಯಪೂಜಾರಿ, ಕಲಾವಿದರಾದ ಸುಬ್ರಾಯ ಹೆಬ್ಬಾರ್, ಶ್ರೀಧರ ಕಾಂಚನ್, ಶ್ರೀನಿವಾಸ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಮಾಹಿತಿ ಕಾರ್ಯಕ್ರಮ ನಡೆಯಿತು.

Bhagyavan Sanil

Mulki-13071503

Comments

comments

Comments are closed.

Read previous post:
Mulki-13071502
ಯಕ್ಷಗಾನದಿಂದ ಜನಜಾಗೃತಿ ಸಾದ್ಯ

ಮೂಲ್ಕಿ: ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಜೀವನದಲ್ಲಿ ಶಿಸ್ತು,ಪ್ರಾಮಾಣಿಕತೆ, ಶೃದ್ಧೆ ಮತ್ತು ಸಮರ್ಪಣಾಭಾವದಿಂದ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ ಇನ್ನೊಬ್ಬರಿಗೆ ಮಾದರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಕ್ಷಗಾನದಿಂದ ಜನಜಾಗೃತಿ...

Close